ತೀರ್ಥಹಳ್ಳಿಯಲ್ಲಿ ಇಬ್ಬರು ಮಹಿಳೆಯರಿಗೆ KFD ಪಾಸಿಟಿವ್, ಕನ್ನಂಗಿ ಭಾಗದಲ್ಲಿ ಆತಂಕ
SHIVAMOGGA LIVE NEWS | 9 ಮಾರ್ಚ್ 2022 ತೀರ್ಥಹಳ್ಳಿ ತಾಲೂಕಿನಲ್ಲಿ KFD ಆತಂಕ ಮುಂದುವರೆದಿದೆ. ಇಬ್ಬರು ಮಹಿಳೆಯರು KFD ಸೋಂಕಿಗೆ ತುತ್ತಾಗಿದ್ದಾರೆ. ಕನ್ನಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವತ್ತಿ ಗ್ರಾಮದಲ್ಲಿ ಕಲ್ಪನಾ (40) ಮತ್ತು ದೇವಕಿ (45) ಎಂಬುವವರಿಗೆ KFD ಪಾಸಿಟಿವ್ ಬಂದಿದೆ. ಕಲ್ಪನಾ ಅವರು ದಾವಣಗೆರೆ ಜಿಲ್ಲೆಯಿಂದ ಯಡವತ್ತಿ ಗ್ರಾಮಕ್ಕೆ ಕೆಲಸಕ್ಕೆಂದು ಬಂದಿದ್ದಾರೆ. ತೀವ್ರ ಜ್ವರದಿಂದ ಬಳಲುತ್ತಿದ್ದ ಅವರು ಜೆ.ಸಿ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮರಳಿದ್ದಾರೆ. ಇನ್ನು, ದೇವಕಿ ಅವರಿಗೆ ಜೆ.ಸಿ.ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಆರೋಗ್ಯ ಸ್ಥಿರವಾಗಿದೆ. … Read more