ಶಿವಮೊಗ್ಗ ಲೈವ್.ಕಾಂ | BHADRAVATHI | 25 ಜನವರಿ 2020
ಗ್ರಾಮಾಂತರ ಪಿಎಸ್‌ಐ ಸುನಿಲ್ ಕುಮಾರ್ ಅಮಾನತಿಗೆ ಒತ್ತಾಯಿಸಿ ಮಾಜಿ ಶಾಸಕ ಎಂ.ಜೆ.ಅಪ್ಪಾಜಿ ನೇತೃತ್ವದಲ್ಲಿ ಮಿನಿವಿಧಾನಸೌಧ ಮುಂಭಾಗ ಅಹೋರಾತ್ರಿ ಅನಿರ್ದಿಷ್ಟಾವದಿ ಧರಣಿ ಸತ್ಯಾಗ್ರಹ ನಡೆದಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಈ ಸಂದರ್ಭ ಮಾತನಾಡಿದ ಪ್ರತಿಭಟನಾಕಾರರು, ಕೂಡ್ಲಿಗೆರೆ, ಜಿಪಂ ವ್ಯಾಪ್ತಿಯ ಅರಳಿಹಳ್ಳಿಯಲ್ಲಿ ಜಿಪಂ ಸದಸ್ಯ ಎಸ್.ಮಣಿಶೇಖರ್ ಸಹಸ್ರಾರು ರೈತ ಕುಟುಂಬಗಳಿಗೆ ಅನುಕೂಲ ಕಲ್ಪಿಸಲು ಬಳಸೋಕೆರೆ ಅಭಿವೃದ್ಧಿಗೆ ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ಕೆರೆಪಕ್ಕದ, ಅದೇ ಗ್ರಾಮದ ಮಲ್ಲಿಕಾರ್ಜುನ, ಚಂದ್ರ, ಹೇಮಕುಮಾರ್, ನಾಗರಾಜ್ ಎಂಬ ಸಹೋದರರು ಗ್ರಾಮದ ಅಭಿವೃದ್ದಿಯಾದಲ್ಲಿ ತಮ್ಮ ಜಮೀನು ತೆರವುಗೊಳಿಸಬಹುದೆಂದು ತಪ್ಪಾಗಿ ಅರ್ಥೈಸಿಕೊಂಡು ಜ15 ರಂದು ಸದಸ್ಯ ಮಣಿಶೇಖರ್ ಮೇಲೆ ಗುಂಪು ಕಟ್ಟಿನಿಂದಿಸಿ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆಪಾದಿಸಿದರು.
ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಹಲ್ಲೆಗೊಳಗಾದ ಮಣಿಶೇಖರ್ ಮೇಲೂ ಪ್ರಕರಣ ದಾಖಲಿಸಲಾಗಿದೆ. ಹಲ್ಲೆ ಆರೋಪಿಗಳನ್ನು ಕೂಡಲೇ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕು. ಮಣಿಶೇಖರ್ ಮೇಲಿನ ಸುಳ್ಳು ಕೇಸ್ ವಜಾಗೊಳಿಸಿ ಸೂಕ್ತ ರಕ್ಷಣೆ ನೀಡಬೇಕು. ಸಬ್‌ಇನ್ಸ್‌ಪೆಕ್ಟರ್ ಸುನಿಲ್ ಕುಮಾರ್ ಅಮಾನತುಗೊಳಿಸಬೇಕು ಎಂದು ಪ್ರತಿಭಟನಾಕಾರರು ಧರಣಿ ಸತ್ಯಾಗ್ರಹ ನಡೆಸಿದರು.
ಈ ಸಂದರ್ಭ ಜಿಪಂ ಸದಸ್ಯ ಮಣಿಶೇಖರ್, ಮುಖಂಡರಾದ ಎಸ್.ಕುಮಾರ್, ಆರ್.ಕರುಣಾಮೂರ್ತಿ, ಎಂ.ಎಸ್.ಸುಧಾಮಣಿ, ಆನಂದ್, ಬದರಿನಾರಾಯಣ, ಕುಮ್ಮಿಚಂದ್ರಣ್ಣ, ಫೀರ್ ಷರೀಫ್, ನರಸಿಂಹನ್, ವಿಶಾಲಾಕ್ಷಿ, ಗುಣಶೇಖರ್, ಲೋಕೇಶ್ವರರಾವ್, ಜಯರಾಮ್, ಶಿವರಾಜ್, ಚಂದ್ರಶೇಖರ್, ಕರಿಯಪ್ಪ ಸೇರಿದಂತೆ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]