ಭದ್ರಾ ಜಲಾಶಯದ ಒಳ ಹರಿವು ಕುಸಿತ, ಅಚ್ಚುಕಟ್ಟು ಭಾಗದ ರೈತರಲ್ಲಿ ಆತಂಕ, ಇವತ್ತು ಎಷ್ಟಿದೆ ನೀರಿನ ಮಟ್ಟ?

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIVAMOGGA LIVE NEWS | 18 JUNE 2024

BHADARAVATHI : ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆ ಸಂಪೂರ್ಣ ತಗ್ಗಿದೆ. ಹಾಗಾಗಿ ಭದ್ರಾ ಜಲಾಶಯದ (Dam) ಒಳ ಹರಿವು ಕುಸಿತ ಕಂಡಿದೆ. ಇದು ಅಚ್ಚುಕಟ್ಟು ಭಾಗದ ರೈತರಲ್ಲಿ ಆತಂಕ ಮೂಡಿಸಿದೆ.

ಜೂ.18ರಂದು ಭದ್ರಾ ಜಲಾಶಯದ ಒಳ ಹರಿವು 446 ಕ್ಯೂಸೆಕ್‌ ಇದೆ. 186 ಅಡಿ ಗರಿಷ್ಠ ಸಾಮರ್ಥ್ಯದ ಜಲಾಶಯದಲ್ಲಿ ಇವತ್ತಿಗೆ ನೀರಿನ ಮಟ್ಟ 118.11 ಅಡಿಯಷ್ಟು ಇದೆ. ಒಳ ಹರಿವು ಕಡಿಮೆ ಇರುವುದರಿಂದ ನೀರಿನ ಮಟ್ಟ ಏರಿಕೆಯಾಗುತ್ತಿಲ್ಲ. ಜೂ.17ರಂದು ಒಳ ಹರಿವು 551 ಕ್ಯೂಸೆಕ್‌ ಇತ್ತು. ‌

ಒಂದು ತಿಂಗಳಲ್ಲಿ ಸಾವಿರ ಕ್ಯೂಸೆಕ್‌ ಕಡಿತ

ಕಳೆದ ತಿಂಗಳು ಚಿಕ್ಕಮಗಳೂರು ಭಾಗದಲ್ಲಿ ಉತ್ತಮ ಮಳೆಯಾಗಿತ್ತು. ಒಂದು ವಾರದಿಂದ ಈಚೆಗೆ ಮಳೆ ಪ್ರಮಾಣ ತಗ್ಗಿದೆ. ಮೇ 20ರಂದು ಭದ್ರ ಜಲಾಶಯದ ಒಳ ಹರಿವು 1347 ಕ್ಯೂಸೆಕ್‌ ಇತ್ತು. ಮೇ 21ರಂದು1556 ಕ್ಯೂಸೆಕ್, ಮೇ 25ರಂದು 1387 ಕ್ಯೂಸೆಕ್‌ ಇತ್ತು. ಜೂ.1ರಂದು 483 ಕ್ಯೂಸೆಕ್‌ಗೆ ಕುಸಿತ ಕಂಡಿತು. ಜೂ.10ರಂದು 642 ಕ್ಯೂಸೆಕ್‌ ಒಳಹರಿವು, ಜೂ.9ರಂದು 549 ಕ್ಯೂಸೆಕ್, ಜೂ.17ರಂದು 551 ಕ್ಯೂಸೆಕ್‌, ಇವತ್ತು 446 ಕ್ಯೂಸೆಕ್‌ಗೆ ಇಳಿಕೆಯಾಗಿದೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಕುದುರೆ ಏರಿ ಬಂದ ಶಾಸಕ, ಕಾರಿಗೆ ಹಗ್ಗ ಕಟ್ಟಿ ಎಳೆತಂದ ಕಾರ್ಯಕರ್ತರು, ಚಟ್ಟದ ಮೇಲೆ ಬೈಕ್‌

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment