ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಭದ್ರಾವತಿ: ಭದ್ರಾ ಎಡದಂಡೆ ನಾಲೆಗೆ ಹೊಸ ಗೇಟ್ (Gate) ಅಳವಡಿಸಲು ಇನ್ನೂ ಒಂದೂವರೆ ತಿಂಗಳು ಕಾಲವಕಾಶ ಬೇಕಿದೆ. ಆದ್ದರಿಂದ ಮುಂಗಾರು ಹಂಗಾಮಿನಲ್ಲಿ ನಾಲೆಗೆ ನೀರು ಹರಿಸಲು ಸಾಧ್ಯವಿಲ್ಲ. ಎಡದಂಡೆ ನಾಲೆ ವ್ಯಾಪ್ತಿಯ ರೈತರು ಮುಂಗಾರು ಭತ್ತ ಸೇರಿದಂತೆ ಹೆಚ್ಚು ನೀರು ಅವಲಂಬಿಸುವ ಬೆಳೆ ಬೆಳೆಯದಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಭದ್ರಾ ಜಲಾಶಯದ ಎಡದಂಡೆ ನಾಲೆಗೆ ಹೊಸ ಗೇಟ್ ಅಳವಡಿಸಬೇಕಿದೆ. ಕಾರ್ಯಪಾಲಕ ಇಂಜಿನಿಯರ್ ವರದಿಯಂತೆ ಗೇಟ್ ಅಳವಡಿಕೆಗೆ ಅಂದಾಜು ಒಂದೂವರೆ ತಿಂಗಳು ಕಾಲಾವಕಾಶ ಬೇಕು. ಹಾಗಾಗಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಎಡದಂಡೆ ನಾಲೆಗೆ ನೀರು ಹರಿಸಲು ಸಾಧ್ಯವಾಗುವುದಿಲ್ಲ.

ಭದ್ರಾ ಜಲಾಶಯದ ಎಡದಂಡೆ ನಾಲೆಯ ವ್ಯಾಪ್ತಿಗೆ ಒಳಪಡುವ ರೈತರು ಈ ನಾಲೆಯ ನೀರನ್ನು ಅವಲಂಬಿಸಿ ಭತ್ತ ಅಥವಾ ಇನ್ಯಾವುದೇ ಹೆಚ್ಚು ನೀರು ಅವಲಂಬಿತ ಬೆಳೆಗಳನ್ನು ಬೆಳೆಯಬಾರದು. ಒಂದು ವೇಳೆ ಬೆಳೆಗಳನ್ನು ಬೆಳೆದು ನಾಲೆಯಿಂದ ನೀರು ಸಿಗದೆ ಬೆಳೆ ನಷ್ಟವಾದಲ್ಲಿ ನೀರಾವರಿ ಇಲಾಖೆ ಜವಾವಾಬ್ದಾರಿಯಲ್ಲ ಎಂದು ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ » ಆಗುಂಬೆ ಘಾಟಿ ಸಮೀಪ ಧರೆಗುರುಳಿದ ಮರ, ಕೆಲಕಾಲ ಹೆದ್ದಾರಿ ಬಂದ್

LATEST NEWS
- ಮನೆಯ ಮೀಟರ್ ಬೋರ್ಡ್ ಮೇಲೆ ಕೀ ಇಡುವ ಅಭ್ಯಾಸ ಇದ್ಯಾ? ನಿದಿಗೆಯಲ್ಲಿ ದಾಖಲಾಯ್ತು ಕೇಸ್, ಯಾಕೆ?

- ಶಿವಮೊಗ್ಗದ ‘ಶಿವಚೌಡಿ ಧರಣಿ’ ಇನ್ನಿಲ್ಲ, ವಿಭಿನ್ನವಾಗಿ ತಿಥಿ ಕಾರ್ಯ ಮಾಡಿದ ಮಾಲೀಕ

- ಸಹ್ಯಾದ್ರಿ ಉತ್ಸವ, ಸಮಗ್ರ ಪ್ರಶಸ್ತಿ ಇಂದಿರಾ ಗಾಂಧಿ ಮಹಿಳಾ ಕಾಲೇಜು ಮುಡಿಗೆ

- ಮಾವನ ಕುತ್ತಿಗೆ ಸೀಳಿ ಕೊಲೆಗೆ ಯತ್ನಿಸಿದ ಅಳಿಯ, ಎಲ್ಲಿ? ಕಾರಣವೇನು?

- ಗೆಜ್ಜೇನಹಳ್ಳಿಯಲ್ಲಿ ಹಿಟ್ ಅಂಡ್ ರನ್ ಅಪಘಾತ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು

About The Editor
ನಿತಿನ್ ಆರ್.ಕೈದೊಟ್ಲು

















