BHADRAVATHI NEWS, 30 OCTOBER 2024 : ತಾಲೂಕಿನ ಫಟಾಫಟ್ ಸುದ್ದಿಗಳು ಇಲ್ಲಿವೆ.
ವಿಐಎಸ್‌ಎಲ್ ಉಳಿವಿಗಾಗಿ ಗಣಹೋಮ
ಭದ್ರಾವತಿ ಸಿಟಿ : ಎಸ್‌ಎವಿ ಸರ್ಕಲ್‌ನ ಶ್ರೀ ವಿನಾಯಕ ಸೇವಾ ಸಮಿತಿಯ 14ನೇ ವರ್ಷದ ಗಣೇಶೋತ್ಸವ ಅಂಗವಾಗಿ ವಿಐಎಸ್‌ಎಲ್ ಕಾರ್ಖಾನೆ ಉಳಿವಾಗಿ ಗಣಹೋಮ ನಡೆಸಲಾಯಿತು. ನಾಗರಕಟ್ಟೆ ದೇವಸ್ಥಾನದ ಪ್ರಧಾನ ಅರ್ಚಕ ರಮೇಶ್ ತರಳಿಮಠ ನೇತೃತ್ವದಲ್ಲಿ ಹೋಮ ನಡೆಯಿತು. ಪೂರ್ಣಾಹುತಿ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ವಿಐಎಸ್‌ಎಲ್ ಕಾರ್ಖಾನೆ ಉಳಿವಿಗಾಗಿ ಕಳೆದ ವರ್ಷವು ಗಣಹೋಮ ನೆರವೇರಿಸಲಾಗಿತ್ತು. ನ.2ರಂದು ಗಣೇಶ ಮೂರ್ತಿಯ ರಾಜಬೀದಿ ಉತ್ಸವ ಮತ್ತು ವಿಸರ್ಜನೆ ನಡೆಯಲಿದೆ.
‘ನಟ ಪುನಿತ್ ಮಾದರಿ ಆಗಿದ್ದರುʼ
ಭದ್ರಾವತಿ ಸಿಟಿ : ತಾಲೂಕು ಪಂಚಾಯಿತಿ ಸಮೀಪದ ಕನಕ ಆಟೋ ಚಾಲಕರ ಸಂಘದ ವತಿಯಿಂದ ನಟ ಪುನಿತ್ ರಾಜ್‌ಕುಮಾರ್ ಅವರ 3ನೇ ಪುಣ್ಯ ಸ್ಮರಣೆ ಕಾರ್ಯಕ್ರಮ ನಡೆಯಿತು. ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಬಿ.ಎಸ್.ಗಣೇಶ್, ವೀರಶೈವ ಸೇವಾ ಸಮತಿ ಅಧ್ಯಕ್ಷ ಆರ್.ಮಹೇಶ್ ಚಾಲನೆ ನೀಡಿದರು.
ನಟ ಪುನಿತ್ ರಾಜ್‌ಕುಮಾರ್ ಸಮಾಜಕ್ಕೆ ಮಾದರಿಯಾಗಿದ್ದರು. ಅವರ ಸೇವಾ ಕಾರ್ಯಗಳನ್ನು ನಾವೆಲ್ಲರು ಮೈಗೂಡಿಸಿಕೊಳ್ಳಬೇಕು. ಮನುಷ್ಯ ಜನ್ಮ ಶ್ರೇಷ್ಠವಾದದ್ದು. ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಾರ್ಥಕಗೊಳಿಸಿಕೊಳ್ಳಬೇಕು.
ಬಿ.ಎಸ್.ಗಣೇಶ್, ಯುವ ಮುಖಂಡ
ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆ, ತಾಪಮಾನ ತುಸು ಹೆಚ್ಚಳ, ಅಲ್ಲಲ್ಲಿ ತುಂತುರು ಮಳೆ ಸಂಭವ
![]() |
ಮನೆ ಮೇಲೆ ದಾಳಿ, ಗಾಂಜಾ ವಶಕ್ಕೆ
ಭದ್ರಾವತಿ ತಾಲೂಕು : ಮನೆಯೊಂದರಲ್ಲಿ ಗಾಂಜಾ ದಾಸ್ತಾನು ಮಾಡಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ 5 ಕೆ.ಜಿ ಒಣ ಗಾಂಜಾ ವಶಕ್ಕೆ ಪಡೆದಿದ್ದಾರೆ. ದರದಲ್ಲಿ ಗ್ರಾಮದ ಮನೆ ಮೇಲೆ ದಾಳಿ ನಡೆಸಿ ಗಾಂಜಾ ವಶಕ್ಕೆ ಪಡೆಯಲಾಗಿದೆ. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ವೈರಲ್ ಆದ ದೆವ್ವ, ವಾರ್ನಿಂಗ್ ನೀಡಿದ ಶಿವಮೊಗ್ಗ ಪೊಲೀಸ್
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200