HOLEHONNURU NEWS, 15 OCTOBER 2024 : ಕಳೆದ ಕೆಲವು ದಿನ ಸುರಿದ ಮಳೆಗೆ ಭದ್ರಾವತಿ ತಾಲೂಕು ಹಂಚಿನಸಿದ್ದಾಪುರ ಗ್ರಾಮದಲ್ಲಿ ಭದ್ರಾ ನಾಲೆಗೆ ಅಡ್ಡಲಾಗಿ ನಿರ್ಮಿಸಿದ್ದ ಕಿರು ಸೇತುವೆ (Bridge) ಕುಸಿದು ಬಿದಿದೆ. ಇದರಿಂದ ರೈತರ ಜಮೀನುಗಳಿಗೆ ಸಂಪರ್ಕ ಕಡಿತವಾಗಿದೆ.
ಹಂಚಿನಸಿದ್ದಾಪುರ ಗ್ರಾಮದಿಂದ ಶ್ರೀ ಸಿದ್ದೇಶ್ವರ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯು ಶಿಥಿಲಗೊಂಡಿತ್ತು. ಭಾರಿ ಮಳೆಗೆ ಶನಿವಾರ ಸೇತುವೆ ಕುಸಿದು ಬಿದ್ದಿದೆ.

ಇದನ್ನೂ ಓದಿ:
ವಿಶೇಷ ವಿಮಾನದಲ್ಲಿ ಶಿವಮೊಗ್ಗಕ್ಕೆ ಆಗಮಿಸಿದ ಅಮಿತ್ ಷಾ
ಇದನ್ನೂ ಓದಿ » ಸಿಗಂದೂರು ಸೇತುವೆ, ಸಂಸದ ರಾಘವೇಂದ್ರ ಪ್ರಕಟಿಸಿದ ಫೋಟೊ ವೈರಲ್
ಇದು ಸುಮಾರು 50ವರ್ಷಕ್ಕೂ ಹೆಚ್ಚು ಹಳೆಯ ಸೇತುವೆ. ಶಿಥಿಲವಾಗಿದ್ದ ಹಿನ್ನೆಲೆ ಪರ್ಯಾಯ ಸೇತುವೆ ನಿರ್ಮಾಣ ಮಾಡುವಂತೆ ಸ್ಥಳೀಯರು ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರು. ಈ ಕಿರು ಸೇತುವೆ ಕುಸಿದಿರುವುದರಿಂದ ಅನೇಕ ರೈತರ ಜಮೀನುಗಳಿಗೆ ಸಂಪರ್ಕ ಕಡಿತವಾಗಿದೆ. ಶ್ರೀ ಸಿದ್ದೇಶ್ವರ ದೇವಸ್ಥಾನಕ್ಕು ತೆರಳದಂತಾಗಿದೆ.



