NEWS HIGHLIGHTS
SHIMOGA NEWS, 13 OCTOBER 2024 : ಸಿಗಂದೂರು ಸೇತುವೆ ಕಾಮಗಾರಿಯ ಫೋಟೊ ಒಂದನ್ನು ಸಂಸದ ಬಿ.ವೈ.ರಾಘವೇಂದ್ರ ತಮ್ಮ ಸಾಮಾಜಿಕ ಜಲತಾಣದಲ್ಲಿ ಷೇರ್ ಮಾಡಿದ್ದಾರೆ. ಇದು ವೈರಲ್ (Viral) ಆಗಿದ್ದು ವಾಟ್ಸಪ್ ಸ್ಟೇಟಸ್ ಸೇರಿದಂತೆ ಹಲವರ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ರಾರಾಜಿಸುತ್ತಿದೆ.
➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.ಸಂಜೆ ಹೊತ್ತಲ್ಲಿ ಸೇತುವೆ ಕಾಮಗಾರಿಯ ಫೋಟೊ ಕ್ಲಿಕ್ಕಿಸಲಾಗಿದೆ. ಎರಡು ಪಿಲ್ಲರ್‌ಗಳ ಮೇಲೆ ಸೇತುವೆ, ಅದಕ್ಕೆ ಹಾಕಿರುವ ರೋಪ್‌ಗಳು ಕಾಣಿಸುತ್ತವೆ. ಕಾಮಗಾರಿ ಪೂರ್ಣಗೊಂಡ ಬಳಿಕ ಸೇತುವೆ ಯಾವ ರೀತಿ ಕಾಣಲಿದೆ ಎಂಬುದು ಈ ಫೋಟೊದಲ್ಲಿ ಕಾಣಿಸುತ್ತಿದೆ.
ಕಳೆದ ವಾರ ಕಾಮಗಾರಿ ಪರಿಶೀಲನೆ

2.44 ಕಿ.ಮೀ ಉದ್ದದ ಸಿಗಂದೂರು ಸೇತುವೆ ಕಾಮಗಾರಿಯನ್ನು ಸಂಸದ ಬಿ.ವೈ.ರಾಘವೇಂದ್ರ ಕಳೆದ ವಾರ ಪರಿಶೀಲನೆ ನಡೆಸಿದ್ದರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ಈ ಸಂದರ್ಭ ಉಪಸ್ಥಿತರಿದ್ದರು. 2025ರ ಏಪ್ರಿಲ್ ತಿಂಗಳಲ್ಲಿ ಸೇತುವೆ ಉದ್ಘಾಟನೆ ಆಗಲಿದೆ ಎಂದು ಸಂಸದ ರಾಘವೇಂದ್ರ ತಿಳಿಸಿದ್ದರು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಆಹ್ವಾನಿಸಲಾಗುತ್ತದೆ ಎಂದು ತಿಳಿಸಿದ್ದರು.
ಇದನ್ನೂ ಓದಿ » ಶಿವಮೊಗ್ಗ ದಸರಾ ಮೆರವಣಿಗೆಗೆ ಅದ್ಧೂರಿ ಚಾಲನೆ, ಅಂಬಾರಿ ಹೊತ್ತು ಸಾಗರನ ರಾಜಗಾಂಭೀರ್ಯ ನಡೆ