ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ
ಭದ್ರಾವತಿ: ಮಳೆಯಿಂದಾಗಿ ಕೆಲವು ಭಾಗಗಳಲ್ಲಿ ನೀರಿನ (Drinking Water) ಬಣ್ಣದಲ್ಲಿ ವ್ಯತ್ಯಾಸವಾಗಿದೆ. ಈ ನೀರನ್ನು ಜನರು ಒಂದು ದಿನ ಬಿಟ್ಟು ಮರುದಿನ ಬಳಸಬಹುದು ಅಥವಾ ನೀರನ್ನು ಬಿಸಿ ಮಾಡಿ ಬಳಸಬಹುದು. ಇದರಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಪೌರಾಯುಕ್ತ ಎನ್.ಕೆ ಹೇಮಂತ್ ತಿಳಿಸಿದ್ದಾರೆ.
ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್ ಅಧ್ಯಕ್ಷತೆಯಲ್ಲಿ ನಗರಸಭೆ ಸಭಾಂಗಣದಲ್ಲಿ ನಡೆದ ಕುಡಿಯುವ ನೀರಿನ ತುರ್ತು ಸಭೆಯಲ್ಲಿ ಪೌರಾಯುಕ್ತ ಹೇಮಂತ್ ಮಾಹಿತಿ ನೀಡಿದರು.
ಮಳೆಯಿಂದಾಗಿ ಭದ್ರಾ ಜಲಾಶಯದಿಂದ ನದಿಗೆ ಹರಿಯುತ್ತಿರುವ ನೀರಿನ ಜೊತೆಗೆ ಚರಂಡಿ, ಹಳ್ಳಕೊಳ್ಳ, ತೋಟ ಮತ್ತು ಜಮೀನಿನ ನೀರು ಸೇರ್ಪಡೆಗೊಂಡು ನೀರು ಮತ್ತಷ್ಟು ಕಲ್ಮಶಗೊಳ್ಳುತ್ತಿದೆ. ನೀರಿನ ಶುದ್ಧೀಕರಣ ಘಟಕದಲ್ಲಿ ಇಸ್ರೇಲ್ ಮತ್ತು ಜಪಾನ್ ಮಾದರಿಯ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಶುದ್ಧೀಕರಿಸಿ ಸರಬರಾಜು ಮಾಡಲಾಗುತ್ತಿದೆ. ಆದರೂ ಕೆಲವೆಡೆ ನೀರಿನ ಬಣ್ಣದಲ್ಲಿ ವ್ಯತ್ಯಾಸವಾಗುತ್ತಿದೆ. ಈ ನೀರು ವಿಷಪೂರಿತವಲ್ಲ ಕುಡಿಯಲು ಯೋಗ್ಯವಾಗಿದೆ ಎಂದರು.
ನಗರಸಭೆಯಿಂದ ಪ್ರತಿದಿನ ನದಿಯಿಂದ 34.67 ಎಂ.ಎಲ್.ಡಿ ನೀರು ಪಡೆದು 31.2 ಎಂ.ಎಲ್.ಡಿ ನೀರು ಶುದ್ಧೀಕರಿಸಲಾಗುತ್ತಿದೆ. 29.64 ಎಂ.ಎಲ್.ಡಿ ಶುದ್ಧೀಕರಿಸಿದ ನೀರು ಕುಡಿಯಲು ಸರಬರಾಜು ಮಾಡಲಾಗುತ್ತಿದೆ. ನಗರಸಭೆ 23.15 ಜಿಎಲ್‌ಎಸ್‌ಆರ್ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. 24,550 ಮನೆ ಮತ್ತು 1,450 ವಾಣಿಜ್ಯ ಬಳಕೆ ನೀರಿನ ಸಂಪರ್ಕ ಹೊಂದಿದ್ದು, ಅಲ್ಲದೆ ಕೈಗಾರಿಕೆ, ವಸತಿರಹಿತ ಸಂಪರ್ಕ (ಕೆ.ಎಸ್.ಆರ್.ಪಿ ಮತ್ತು ಸೋಗಾನೆ ಕಾರಾಗೃಹ) 10 ಎಲ್.ಎಲ್ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಹಿರಿಯ ಸದಸ್ಯ ವಿ. ಕದಿರೇಶ್, ನಗರಸಭೆ ಅಧಿಕಾರಿಗಳಾದ ಪ್ರಸಾದ್, ಸಂತೋಷ್ ಪಾಟೀಲ್, ನೀರು ಸರಬರಾಜು ವಿಭಾಗದ ಎಂ.ಡಿ ಗೌಸ್, ಸದಸ್ಯರಾದ ಶಶಿಕಲಾ ನಾರಾಯಣಪ್ಪ, ಅನುಸುಧಾ ಮೋಹನ್ ಪಳನಿ, ಬಸವರಾಜ್ ಬಿ. ಆನೆ ಕೊಪ್ಪ, ಜಾರ್ಜ್, ಐ.ವಿ ಸಂತೋಷ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ » ಮಾಚೇನಹಳ್ಳಿಯಲ್ಲಿ ಜಾಗೃತಿ ಕಾರ್ಯಾಗಾರ, ಯಾರೆಲ್ಲ ಭಾಗವಹಿಸ್ತಾರೆ?
Drinking Water

