ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | BHADRAVATHI NEWS | 9 ಜನವರಿ 2022
ಆನ್ ಲೈನ್ ಜೂಜಾಟ ಆಡಿಸುತ್ತಿದ್ದವರ ಮೇಲೆ ಭದ್ರಾವತಿ ಪೊಲೀಸರು ದಾಳಿ ಮಾಡಿದ್ದಾರೆ. ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ. ಆನ್ ಲೈನ್ ಜೂಜಾಟವನ್ನು ರಾಜ್ಯ ಸರ್ಕಾರ ನಿಷೇಧ ಮಾಡಿದ್ದು, ಆ ಬಳಿಕ ಜಿಲ್ಲೆಯಲ್ಲಿ ದಾಖಲಾದ ಮೊದಲ ಪ್ರಕರಣ ಇದಾಗಿದೆ.
ಭದ್ರಾವತಿಯ ಹೊಸ ಸಿದ್ದಾಪುರದ ತಾರೇಶ್ (27), ಕಡದಕಟ್ಟೆಯ ಚೇತನ್ (25) ಎಂಬುವವರನ್ನು ಬಂಧಿಸಲಾಗಿದೆ.
ಏನಿದು ಪ್ರಕರಣ?
ಬಂಧಿತರಿಬ್ಬರು ಮೊಬೈಲ್ ಆಪ್ ಮೂಲಕ ಆನ್’ಲೈನ್ ಅಂದರ್ ಬಾಹರ್, ಕ್ಯಾಸಿನೋ, ಕ್ರಿಕೆಟ್ ಬಿಗ್ ಬ್ಯಾಷ್ ಜೂಜಾಟಗಳನ್ನು ನಡೆಸುತ್ತಿದ್ದ ಬಗ್ಗೆ ಆರೋಪವಿತ್ತು. ಜನರಿಂದ ಹಣ ಪಡೆದು ಜೂಜಾಟದಲ್ಲಿ ತೊಡಗಿಸುತ್ತಿದ್ದರು. ಗೆದ್ದವರಿಗೆ ಆನ್ ಲೈನ್ ಮೂಲಕ ಅಥವಾ ಕೆಲವರಿಗೆ ನೇರವಾಗಿ ಹಣ ಕೊಡುತ್ತಿದ್ದರು. ಅಲ್ಲದೆ ಈ ಮೂಲಕ ಲಕ್ಷಾಂತರ ರೂ. ಸಂಪಾದನೆ ಮಾಡಿರುವ ಬಗ್ಗೆ ಆರೋಪವಿತ್ತು.
ಆನ್ ಲೈನ್ ಜೂಜಾಟದ ಕುರಿತು ಖಚಿತ ಮಾಹಿತಿ ಲಭ್ಯವಾದ ಹಿನ್ನೆಲೆ ಭದ್ರಾವತಿ ನ್ಯೂ ಟೌನ್ ಠಾಣೆ ಪೊಲೀಸರು ದಾಳಿ ನಡೆಸಿ, ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ 13 ಸಾವಿರ ರೂ. ನಗದು, 1.51 ಲಕ್ಷ ರೂ. ಮೌಲ್ಯದ ಮೂರು ಮೊಬೈಲ್ ಫೋನ್, ಒಂದು ಕಾರು ವಶಕ್ಕೆ ಪಡೆಯಲಾಗಿದೆ.
ಜಿಲ್ಲೆಯಲ್ಲಿ ಇದೆ ಮೊದಲ ಕೇಸ್
ಆನ್ ಲೈನ್ ಜೂಜಾಟವನ್ನು ರಾಜ್ಯ ಸರ್ಕಾರ ನಿಷೇಧಗೊಳಿಸಿದೆ. ಈ ನಿಯಮ ಜಾರಿಗೆ ಬಂದ ಬಳಿಕ ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲಾಗುತ್ತಿರುವ ಮೊದಲ ಪ್ರಕರಣ ಇದಾಗಿದೆ. ಮೊಬೈಲ್ ಅಪ್ಲಿಕೇಷನ್ ಡೆವಲಪರ್, ಹ್ಯಾಂಡ್ಲರ್’ಗಳು, ಲೋಕಲ್ ಬುಕ್ಕಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಭದ್ರಾವತಿ ಸಿಟಿ ಪ್ರೊಬೆಷನರಿ ಡಿವೈಎಸ್’ಪಿ ಗಜಾನನ ವಾಮನ ಸತಾರ್ ನೇತೃತ್ವದಲ್ಲಿ ನ್ಯೂ ಟೌನ್ ಠಾಣೆ ಸಿಬ್ಬಂದಿ ಸುನೀಲ್ ಕುಮಾರ್, ನಾಗರಾಜ್, ಹನುಮಂತ ಆವಟಿ, ವಿಜಯಕುಮಾರ್.ಡಿ.ಸಿ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422