ಭದ್ರಾ ಜಲಾಶಯದ ಒಳ ಹರಿವು ಹಂತ ಹಂತವಾಗಿ ಏರಿಕೆ, ಇವತ್ತು ಎಷ್ಟಿದೆ ನೀರಿನ ಮಟ್ಟ?

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIVAMOGGA LIVE NEWS | 26 JUNE 2024

DAM LEVEL : ಮಲೆನಾಡು ಭಾಗದಲ್ಲಿ ಮಳೆ ಬಿರುಸಾಗುತ್ತಿದೆ. ಹಾಗಾಗಿ ಭದ್ರಾ ಜಲಾಶಯದ ಒಳ ಹರಿವು ಹಂತ ಹಂತವಾಗಿ ಏರಿಕೆಯಾಗುತ್ತಿದೆ. ಇದೇ ರೀತಿ ಮಳೆ ಪ್ರಮಾಣ ಮತ್ತು ಒಳ ಹರಿವು ಏರಿಕೆಯಾದರೆ ಈ ಬಾರಿ ಜಲಾಶಯ ಭರ್ತಿಯಾಗಲಿದೆ.

ಇವತ್ತು ಬೆಳಗ್ಗೆ 6 ಗಂಟೆಗೆ ಭದ್ರಾ ಜಲಾಶಯದ ಒಳ ಹರಿವು 2276 ಕ್ಯೂಸೆಕ್‌ ದಾಖಲಾಗಿತ್ತು. ಇನ್ನು ನೀರಿನ ಮಟ್ಟ 120 ಅಡಿಗೆ ತಲುಪಿದೆ. 343 ಕ್ಯೂಸೆಕ್‌ ಹೊರಹರಿವು ಇದೆ. ಕಳೆದ ವರ್ಷ ಈ ದಿನ ಜಲಾಶಯದ ನೀರಿನ ಮಟ್ಟ 137.5 ಅಡಿ ಇತ್ತು.

ಮೂರ್ನಾಲ್ಕು ದಿನದಿಂದ ಹಿನ್ನೀರು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಆದ್ದರಿಂದ ಜಲಾಶಯದ ಒಳ ಹರಿವು ಹಂತ ಹಂತವಾಗಿ ಏರಿಕೆಯಾಗುತ್ತಿದೆ. ಸೋಮವಾರ ಬೆಳಗ್ಗೆ ಒಳ ಹರಿವು 771 ಕ್ಯೂಸೆಕ್‌ ಇತ್ತು. ಮಂಗಳವಾರ ಬೆಳಗ್ಗೆ 1419 ಕ್ಯೂಸೆಕ್‌ ಇತುತ. ಇವತ್ತು 2276 ಕ್ಯೂಸೆಕ್‌ ದಾಖಲಾಗಿದೆ.

ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಇವತ್ತು ಸಾಧಾರಣದಿಂದ ಭಾರಿ ಮಳೆಯ ಸಾಧ್ಯತೆ

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment