ಹೊಳೆಹೊನ್ನೂರು ಬೈಪಾಸ್‌ ರಸ್ತೆಯಲ್ಲಿ ಅಪಘಾತ, ಬೈಕ್‌ ಸವಾರನಿಗೆ ಗಂಭೀರ ಗಾಯ, ಹೇಗಾಯ್ತು ಘಟನೆ?

ಶಿವಮೊಗ್ಗ ಲೈವ್.ಕಾಂ | ಹೊಳೆಹೊನ್ನೂರು

ಹೊಳೆಹೊನ್ನೂರು ಬೈಪಾಸ್ ರಸ್ತೆಯ ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿ ಬೈಕ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ ಹೊಡೆದು ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.

holehonnur name graphics

ಎಮ್ಮೆಹಟ್ಟಿಯ ಸ್ನೇಹಿತನ ಮನೆಗೆ ತೆರಳಿ ಹೊಳೆಹೊನ್ನೂರಿಗೆ ತೆರಳುತ್ತಿದ್ದ ವಿನೋದ್.ಹೆಚ್.ಎನ್. ತೆರಳುತ್ತಿದ್ದ ಬೈಕಿಗೆ, ಚನ್ನಗರಿಯಿಂದ ಶಿವಮೊಗ್ಗ ಕಡೆಗೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಬೈಕ್ ಸವಾರ ವಿನೋದ್ ಅವರ ತಲೆ, ಬಲಗಾಲು, ಹಣೆ ಸೇರಿ ವಿವಿಧೆಡೆ ಗಂಭೀರ ಪೆಟ್ಟಾಗಿದೆ. ಅಲ್ಲದೆ, ಬೈಕ್‌ನ ಪೆಟ್ರೋಲ್ ಟ್ಯಾಂಕ್, ಬಂಪರ್ ಹಾಗೂ ಸೈಲೆನ್ಸರ್ ನಜ್ಜುಗುಜ್ಜಾಗಿವೆ ಎಂದು ಆರೋಪಿಸಲಾಗಿದೆ.  

ಗಾಯಾಳು ವಿನೋದ್‌ನನ್ನು ಸುಬ್ಬಯ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಕೆಎಸ್‌ಆರ್‌ಟಿಸಿ ಚಾಲಕನ ವಿರುದ್ಧ ಹೊಳೆಹೊನ್ನೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.