ಶಿವಮೊಗ್ಗ ಲೈವ್
ಶಿವಮೊಗ್ಗ ಲೈವ್.ಕಾಂ | ಹೊಳೆಹೊನ್ನೂರು
ತೋಟವೊಂದರಲ್ಲಿ ತೆಂಗಿನಕಾಯಿಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸ್ಥಳೀಯರ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಭದ್ರಾವತಿ ತಾಲ್ಲೂಕಿನ ಸಿದ್ಲಿಪುರ ಗ್ರಾಮದ ಶ್ರೀಕಂಠಮೂರ್ತಿ ಎಂಬುವವರ ತೋಟದಲ್ಲಿ ಘಟನೆ ನಡೆದಿದೆ.

ಮಧ್ಯಾಹ್ನದ ವೇಳೆಗೆ ತೋಟದೊಳಗೆ ನುಗ್ಗಿದ ಇಬ್ಬರು ಯುವಕರು ತೆಂಗಿನ ಮರದಿಂದ ಕಾಯಿಗಳನ್ನು ಉದುರಿಸಿ ಚೀಲಕ್ಕೆ ತುಂಬಿಕೊಳ್ಳುತ್ತಿದ್ದರು. ಇದನ್ನು ಗಮನಿಸಿದ ತೋಟದ ಕಾರ್ಮಿಕರು ತಕ್ಷಣವೇ ಇಬ್ಬರು ಹಿಡಿದಿದ್ದಾರೆ. ವಿಚಾರ ತಿಳಿದು ಮಾಲೀಕರು ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ.
ಆರೋಪಿಗಳಿಂದ ಸುಮಾರು ₹3,200 ಮೌಲ್ಯದ 75 ರಿಂದ 80 ತೆಂಗಿನಕಾಯಿಗಳನ್ನು ವಶಕ್ಕೆ ಪಡೆಯಲಾಗಿದೆ. ತೋಟವನ್ನು ನಿರ್ವಹಿಸುತ್ತಿದ್ದ ದೇವಂತ್ ಎಂಬುವವರು ದೂರು ನೀಡಿದ್ದಾರೆ. ಘಟನೆ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.