ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 21 JULY 2023
BHADRAVATHI : ಅಪ್ರಾಪ್ತನಿಗೆ ದ್ವಿಚಕ್ರ ವಾಹನವನ್ನು (Bike Ride) ಚಾಲನೆಗೆ ನೀಡಿದ ಕಾರಣ ಬಾಲಕನ ತಂದೆಗೆ ಭದ್ರಾವತಿ ಜೆಎಂಎಫ್ಸಿ ನ್ಯಾಯಾಲಯ 25 ಸಾವಿರ ರೂ. ದಂಡ ವಿಧಿಸಿದೆ.
ಜು.19ರಂದು ಹುತ್ತಾ ಕಾಲೋನಿ ಬಳಿ ಬೈಕ್ ಚಲಾಯಿಸಿಕೊಂಡು (Bike Ride) ಬಂದ ಅಪ್ರಾಪ್ತನನ್ನು ನ್ಯೂ ಟೌನ್ ಠಾಣೆ ಪಿಎಸ್ಐ ರಮೇಶ್ ಅಡ್ಡಗಟಿದ್ದರು. ಬಾಲಕನ ಬಳಿ ಯಾವುದೆ ದಾಖಲೆಗಳು ಇರಲಿಲ್ಲ. ಆತನಿಗೆ 18 ವರ್ಷವಾಗಿಲ್ಲ ಅನ್ನುವುದು ಖಾತ್ರಿಯಾಗಿದೆ. ಕೂಡಲೆ ಬಾಲಕನ ತಂದೆ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಇದನ್ನೂ ಓದಿ – ಶಿವಮೊಗ್ಗ ಪೊಲೀಸರಿಂದ ಚರ್ಚ್ ಫಾದರ್ ಬಂಧನ, ವಿಚಾರಣೆ
ಪ್ರಕರಣವನ್ನು ಅದೇ ದಿನ ವಿಚಾರಣೆಗೆ ತೆಗೆದುಕೊಂಡ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರು ಬಾಲಕನ ತಂದೆ ಜನ್ನಾಪುರ ನಿವಾಸಿ ಶ್ರೀಕಾಂತ್ ಅವರಿಗೆ 25 ಸಾವಿರ ರೂ. ದಂಡ ವಿಧಿಸಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422