ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 31 JULY 2023
BHADRAVATHI : ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರಿಗೆ (workers) 13 ದಿನ ಮಾತ್ರ ಕೆಲಸ ನೀಡಲಾಗುತ್ತಿದೆ. ಕಾರ್ಮಿಕರಿಗೆ ಹೆಚ್ಚಿನ ಅವಧಿ ಕೆಲಸ ನೀಡಲು 75 ಕೋಟಿ ರೂ. ಅನುದಾನ ಅಗತ್ಯವಿದೆ. ಈ ಹಣ ಹೊಂದಿಸಲು ಪ್ರಯತ್ನವಾಗುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ವಿಐಎಸ್‌ಎಲ್ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಕಾರ್ಮಿಕರಿಗೆ (workers) 24 ದಿನ ಉದ್ಯೋಗ ಕೊಡಲಾಗುತ್ತಿತ್ತು. ಈಗ ಕೆಲಸದ ದಿನಗಳನ್ನು 13 ದಿನಕ್ಕೆ ಇಳಿಕೆ ಮಾಡಲಾಗಿದೆ. ಇದು ವಿಪರ್ಯಾಸದ ಸಂಗತಿ ಎಂದರು.
75 ಕೋಟಿ ರೂ. ಅಗತ್ಯವಿದೆ
ಕಾರ್ಖಾನೆಯಲ್ಲಿ ಉತ್ಪಾದನೆ ಹೆಚ್ಚಾದರೆ ಕಾರ್ಮಿಕರಿಗೆ ಹೆಚ್ಚಿನ ದಿನ ಕೆಲಸ ಸಿಗಲಿದೆ. ಕಚ್ಛಾವಸ್ತು ಅಗತ್ಯವಿದ್ದು, ಅದರ ಸರಬರಾಜಿಗೆ 75 ಕೋಟಿ ರೂ. ಅನುದಾನ ಬೇಕು. ಈ ಹಣ ಹೊಂದಾಣಿಕೆ ಮಾಡಲಾಗುತ್ತಿದೆ. ಉತ್ತಮ ಫಲಿತಾಂಶ ಲಭಿಸುವ ಭರವಸೆ ಇದೆ ಎಂದು ರಾಘವೇಂದ್ರ ತಿಳಿಸಿದರು.
ಉತ್ಪಾದನೆ ಸ್ಥಗಿತಗೊಳಿಸಲು ಬಿಟ್ಟಿಲ್ಲ
ವಿಐಎಸ್‌ಎಲ್ ಕಾರ್ಖಾನೆ ಕ್ಲೋಷರ್ ಪಟ್ಟಿಯಲ್ಲಿದ್ದರು ಉತ್ಪಾದನೆಯನ್ನು ಸಂಪೂರ್ಣ ಸ್ಥಗಿತಗೊಳಿಸಲು ಬಿಟ್ಟಿಲ್ಲ. ಕಾರ್ಮಿಕರಿಗೆ ಇಎಸ್‌ಐ ಸೌಲಭ್ಯ ಲಭ್ಯವಾಗುವಷ್ಟು ಉದ್ಯೋಗ ನೀಡಲಾಗಿದೆ. ಭವಿಷ್ಯದಲ್ಲಿ ಕಾರ್ಖಾನೆ ಮತ್ತಷ್ಟು ಅಭಿವೃದ್ಧಿ ಆಗುವ ವಿಶ್ವಾಸವಿದೆ ಎಂದರು.
ಇದನ್ನೂ ಓದಿ – ಭದ್ರಾವತಿ VISL ಕುರಿತು ಸಿಎಂ ಸಿದ್ದರಾಮಯ್ಯ ಮಹತ್ವದ ಪತ್ರ, 5 ಪ್ರಮುಖಾಂಶ ಪ್ರಸ್ತಾಪ, ಏನದು?
ಕಾರ್ಮಿಕರೊಂದಿಗೆ ಸಭೆ
ಇದಕ್ಕೂ ಮೊದಲು ಸಂಸದ ಬಿ.ವೈ.ರಾಘವೇಂದ್ರ ಅವರು ವಿಐಎಸ್‌ಎಲ್ ಅಧಿಕಾರಿಗಳು, ಗುತ್ತಿಗೆ ಕಾರ್ಮಿಕರು, ಕಾರ್ಮಿಕ ಸಂಘಟನೆಗಳ ಮುಖಂಡರ ಜೊತೆಗೆ ಸಭೆ ನಡೆಸಿದರು. ಈ ವೇಳೆ ಗುತ್ತಿಗೆ ಕಾರ್ಮಿಕರು ಆತಂಕಕ್ಕೀಡಾಗುವ ಅಗತ್ಯವಿಲ್ಲ ಎಂದು ಅಭಯ ನೀಡಿದರು. ದೆಹಲಿಯಲ್ಲಿ ಸೇಲ್ ಅಧಿಕಾರಿಗಳ ಜೊತೆ ಕಾರ್ಖಾನೆ ಪುನಶ್ಚೇತನ, ಗುತ್ತಿಗೆ ಕಾರ್ಮಿಕರಿಗೆ ಹಚ್ಚುವರಿ ದಿನಗಳ ಕೆಲಸ ನೀಡುವ ಕುರಿತು ಚರ್ಚೆ ನಡೆಸಲಾಗುತ್ತದೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ – ಭದ್ರಾವತಿ VISL ಕಾರ್ಖಾನೆ ಆವರಣದಲ್ಲಿ ಚಿರತೆ ಪ್ರತ್ಯಕ್ಷ, ಕಾರ್ಮಿಕರಲ್ಲಿ ಆತಂಕ
ಕಾರ್ಮಿಕ ಸಂಘದ ಅಧ್ಯಕ್ಷ ಜಿ.ಜಗದೀಶ್, ಗುತ್ತಿಗೆ ಕಾರ್ಮಿಕರ ಸಂಘಟನೆಗಳ ಅಧ್ಯಕ್ಷರಾದ ಸುರೇಶ್, ಕುಮಾರಸ್ವಾಮಿ, ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಅಧ್ಯಕ್ಷ ಬಿ.ಜಿ.ರಾಮಲಿಂಗಯ್ಯ, ಬಿಜೆಪಿ ಮಂಡಲ ಅಧ್ಯಕ್ಷ ಧರ್ಮಪ್ರಸಾದ್, ಮಂಗೋಟೆ ರುದ್ರೇಶ್, ಆನಂದಕುಮಾರ್, ಮಹಿಳಾ ಆಯೋಗದ ಮಾಜಿ ಅಧ್ಯಕ್ಷ ಮಂಜುಳಾ ಸೇರಿದಂತೆ ಹಲವರು ಇದ್ದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422