ಭದ್ರಾವತಿಯಲ್ಲಿ ಆಂಜನೇಯ ಸ್ವಾಮಿಯ ವೈಭವದ ರಥೋತ್ಸವ, ಏನೆಲ್ಲ ಪೂಜೆ ನಡೆಯಿತು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

SHIVAMOGGA LIVE NEWS | 30 MAY 2024

BHADRAVATHI : ಹಳೇನಗರದ ಕಂಚಿನಬಾಗಿಲು ಶ್ರೀ ಆಂಜನೇಯಸ್ವಾಮಿ ದೇವರ ಮಹಾ ರಥೋತ್ಸವವು (Ratotsava) ವೈಭವದಿಂದ ನಡೆಯಿತು. ರಥೋತ್ಸವ ಅಂಗವಾಗಿ ಮೂಲ ದೇವರಿಗೆ ಅಭಿಷೇಕ ನಂತರ ವಿಶೇಷ ಅಲಂಕಾರ ಮಾಡಲಾಯಿತು. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಚಂದ್ರಶೇಖರ ಉಡುಪ ಮತ್ತು ದೇವಾಲಯದ ಪ್ರಧಾನ ಅರ್ಚಕ ಪವನಕುಮಾರ್‌ ಅವರ ಪೌರೋಹಿತ್ಯದಲ್ಲಿ ಪೂಜಾ ಕೈಂಕರ್ಯಗಳು ನಡೆಯಿತು. ಆಂಜನೇಯಸ್ವಾಮಿಯ ರಜತ ಉತ್ಸವ ಮೂರ್ತಿಯನ್ನು ದೇವಾಲಯದ ಪ್ರಾಕಾರದಲ್ಲಿ ಮಂಗಳವಾದ್ಯ ಸಹಿತವಾಗಿ ಪ್ರದಕ್ಷಿಣೆ ಮಾಡಿ, ನಂತರ ಉತ್ಸವ ಮೂರ್ತಿಯನ್ನು ಅಡ್ಡಪಲ್ಲಕ್ಕಿಯಲ್ಲಿರಿಸಿ ರಾಜಬೀದಿ ಉತ್ಸವದ ಮೂಲಕ ಹಳೇನಗರದ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯಕ್ಕೆ ತೆರಳಿ ಸಲ್ಲಿಸಲಾಯಿತು. ಪೂಜೆ ನಂತರ ಪುನಾ ಅದೇ ಮಾರ್ಗದಲ್ಲಿ ಬಂದು ಆಂಜನೇಯಸ್ವಾಮಿಯ ಉತ್ಸವ ಮೂರ್ತಿಯನ್ನು ರಥದಲ್ಲಿರಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತಾದಿಗಳಿಗೆ ತೀರ್ಥಪ್ರಸಾದ, ಅನ್ನದಾನ ವ್ಯವಸ್ಥೆ ಮಾಡಲಾಗಿತ್ತು. ದೇವಾಲಯ ಸಮಿತಿ ಕೆ.ನರಸಿಂಹಮೂರ್ತಿ ಪದಾಧಿಕಾರಿಗಳು ಹಾಜರಿದ್ದರು.

ಇದನ್ನೂ ಓದಿ – ವಿದೇಶಕ್ಕೆ ತೆರಳಲು ಸಿದ್ಧವಾಗಿದ್ದ ಶಿವಮೊಗ್ಗದ ಪ್ರೊಫೆಸರ್‌ಗೆ ಲಕ್ಷ ಲಕ್ಷ ವಂಚನೆ, ಆಗಿದ್ದೇನು?

Leave a Comment