ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | BHADRAVATHI | 06 ಮೇ 2022
ಭದ್ರಾವತಿ ಹಳೆನಗರದ ಹಳದಮ್ಮ ದೇವಿ ಜಾತ್ರಾ ಮಹೋತ್ಸವ ಮತ್ತು ಊರ ಹಬ್ಬದ ಅಂಗವಾಗಿ ಮಹಾ ಸಿಡಿ ಉತ್ಸವ ನೆರವೇರಿಸಲಾಯಿತು.
ಜಾತ್ರೆ ಮತ್ತು ಸಿಡಿ ಉತ್ಸವ ಕಣ್ತುಂಬಿಕೊಳ್ಳಲು ದೊಡ್ಡ ಸಂಖ್ಯೆಯ ಭಕ್ತರು ಆಗಮಿಸಿದ್ದರು. ಇಲ್ಲಿನ ಸಿಡಿ ಉತ್ಸವ ಮೈ ನವಿರೇಳಿಸುತ್ತದೆ. ಹಲವು ವರ್ಷದಿಂದ ನಡೆದುಕೊಂಡು ಬಂದಿರುವ ಈ ಉತ್ಸವ ಕಣ್ತುಂಬಿಕೊಳ್ಳುವುದಕ್ಕೆ ದೊಡ್ಡ ಸಂಖ್ಯೆಯ ಜನ ಸೇರಿದ್ದರು.
ಏನಿದು ಸಿಡಿ ಉತ್ಸವ?
ಜಾತ್ರೆ ಅಂಗವಾಗಿ ಸಿಡಿ ಕಂಬಕ್ಕೆ ಪೂಜೆ ಸಲ್ಲಿಸಲಾಯಿತು. ಹಳದಮ್ಮ ದೇವಿಯ ಉತ್ಸವ ಮೂರ್ತಿಯನ್ನು ಸಿಡಿ ಕಂಬದ ಬಳಿ ತಂದು ಪೂಜೆ ಸಲ್ಲಿಸಲಾಯಿತು. ಸಿಡಿ ಕಂಬಕ್ಕೆ ಅಡ್ಡಲಾಗಿ ಕಂಬ ಕಟ್ಟಲಾಗಿತ್ತು. ಅಡ್ಡ ಕಂಬದ ಒಂದು ತುದಿಗೆ ಅಂಬೇಡ್ಕರ್ ನಗರದ ಲಿಂಗಪ್ಪ ಅವರನ್ನು ಕಟ್ಟಲಾಗಿತ್ತು. ಮತ್ತೊಂದು ತುದಿಯನ್ನು ಭಕ್ತರು ಹಿಡಿದು ಸಿಡಿ ಆಡಿಸಿದರು.
ಲಿಂಗಪ್ಪ ಅವರು ಕೈಯಲ್ಲಿ ಬೇವಿನಸೊಪ್ಪು ಹಿಡಿದು ಕೈ, ಕಾಲು ಬಡಿಯುತ್ತ ಹಕ್ಕಿಯಂತೆ ಆಗಸದಲ್ಲಿ ಹಾರಾಡಿ ಸಿಡಿ ಉತ್ಸವದಲ್ಲಿಪಾಲ್ಗೊಂಡರು. ಬಳಿಕ ಮಕ್ಕಳು, ಭಕ್ತರು ಕೂಡ ಸಿಡಿ ಉತ್ಸವದಲ್ಲಿ ಪಾಲ್ಗೊಂಡು ಪುನೀತರಾದರು.
ಸಿಡಿ ಉತ್ಸವವನ್ನು ಕಣ್ತುಂಬಿಕೊಳ್ಳಲು ದೊಡ್ಡ ಸಂಖ್ಯೆಯ ಜನರು ಹಳೆನಗರದ ಹಳದಮ್ಮ ದೇವಿ ದೇಗುಲದ ಮುಂಭಾಗ ಸೇರಿದ್ದರು. ಕಟ್ಟಡಗಳ ಮೇಲೆಲ್ಲ ನಿಂತು ಸಿಡಿ ಉತ್ಸವ ವೀಕ್ಷಿಸಿದರು. (BHADRAVATHI)
ಇದನ್ನೂ ಓದಿ – ಇವತ್ತಿನಿಂದ ಭದ್ರಾ ಜಲಾಶಯದಿಂದ ನೀರು ಹೊರಕ್ಕೆ, ಎಷ್ಟು ದಿನ ನೀರು ಹರಿಸಲಾಗುತ್ತದೆ? ಕಾರಣವೇನು?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422