ಶಿವಮೊಗ್ಗ ಲೈವ್.ಕಾಂ | BHADRAVATHI NEWS | 5 JUNE 2021
ಕರೋನ ಸೋಂಕಿಗೆ ತುತ್ತಾಗಿ ಭದ್ರಾವತಿ ಟ್ರಾಫಿಕ್ ಠಾಣೆ ಸಬ್ ಇನ್ಸ್ ಪೆಕ್ಟರ್ ಕೊನೆಯುಸಿರೆಳೆದಿದ್ದಾರೆ. ಹೋಂ ಐಸೊಲೇಷನ್‍ಗೆ ಒಳಗಾಗಿದ್ದ ಅವರು ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಸಬ್ ಇನ್ಸ್ ಪೆಕ್ಟರ್ ಕೆ.ಬಿ.ರಮೇಶ್ ಅವರಿಗೆ ಮೇ 14ರಂದು ಸೋಂಕು ತಗುಲಿತ್ತು. ಹಾಗಾಗಿ ಹೋಂ ಐಸೊಲೇಷನ್‍ಗೆ ಒಳಗಾಗಿದ್ದರು. ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ರಮೇಶ್ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಸಾಗರ, ಕಾರ್ಗಲ್ ಠಾಣೆಗಳಲ್ಲಿ ಮುಖ್ಯ ಪೇದೆಯಾಗಿ, ಕಾರ್ಗಲ್, ಸೊರಬ ಠಾಣೆಯಲ್ಲಿ ಪಿಎಸ್ಐ ಆಗಿದ್ದರು. ಭದ್ರಾವತಿ ಸಂಚಾರಿ ಠಾಣೆಯಲ್ಲಿ ಪಿಎಸ್‍ಐ ಆಗಿದ್ದ ರಮೇಶ್ ಅವರು ಇನ್ನೊಂದು ತಿಂಗಳಲ್ಲಿ ನಿವೃತ್ತರಾಗಬೇಕಿತ್ತು. ಪತ್ನಿ, ಓರ್ವ ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
ಶಾಸಕ ಹಾಲಪ್ಪ ಕಂಬನಿ
ಸಬ್ ಇನ್ಸ್ ಪೆಕ್ಟರ್ ಕೆ.ಬಿ.ರಮೇಶ್ ನಿಧನಕ್ಕೆ ಸಾಗರ ಶಾಸಕ ಹರತಾಳು ಹಾಲಪ್ಪ ಕಂಬನಿ ಮಿಡಿದಿದ್ದಾರೆ. ರಮೇಶ್ ಅವರು ಕಾಲೇಜು ದಿನಗಳಲ್ಲಿ ನನ್ನ ಕ್ಲಾಸ್ ಮೇಟ್. ಅನೇಕ ಬಾರಿ ರಮೇಶ್ ಅವರ ಮನೆಗೂ ಹೋಗಿ ಆತಿಥ್ಯ ಸ್ವೀಕರಿಸಿದ್ದೇನೆ. ಅವರ ಅಗಲಿಕೆ ಮನಸಿಗೆ ತೀವ್ರ ದುಃಖ ಉಂಟು ಮಾಡಿದೆ ಎಂದಿದ್ದಾರೆ.
ಇನ್ಮುಂದೆ ಕರೋನ ಪರೀಕ್ಷೆಗೆ ಆಸ್ಪತ್ರೆಗೆ ಹೋಗೋದೆ ಬೇಡ. ನಿಮ್ಮ ಮನೆಗೆ ಬಂದು ಸ್ವ್ಯಾಬ್ ಪಡೆಯಲಾಗುತ್ತದೆ. ಇಲ್ಲಿರುವ ನಂಬರ್‍ಗೆ ಕರೆ ಮಾಡಿ, ಮಾಹಿತಿ ಪಡೆಯಿರಿ.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]