SHIVAMOGGA LIVE NEWS | 18 MAY 2024
HOLEHONNURU : ಶ್ರೀ ಅಂತರಘಟ್ಟಮ್ಮ ದೇವಿಯ ರಥೋತ್ಸವ (Rathotsava) ವಿಜೃಂಭಣೆಯಿಂದ ನೆರವೇರಿತು. ವಿವಿಧೆಡೆಯಿಂದ ಬಂದಿದ್ದ ಭಕ್ತರು ದೇವಿಗೆ ಪೂಜೆ ಸಲ್ಲಿಸಿದರು. ರಥ ಎಳೆದು ದೇವಿಯ ಕೃಪೆ ಬೇಡಿದರು.
ರಥೋತ್ಸವಕ್ಕೂ ಮುನ್ನ ದೇವಿಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಮಹಾ ಮಂಗಳಾರತಿ ನೆರವೇರಿತು. ಮಹಿಳೆಯರು ಮಡಿಲಕ್ಕಿ ಅರ್ಪಿಸಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಉತ್ಸವ ಮೂರ್ತಿಯ ಮೆರವಣಿಗೆ ನೆರವೇರಿಸಲಾಯಿತು. ಬಳಿಕ ಪುಷ್ಪಾಲಂಕಾರ ಮಾಡಿದ್ದ ರಥದಲ್ಲಿ ದೇವಿಯನ್ನು ಕೂರಿಸಿ ರಥೋತ್ಸವ ನೆರವೇರಿಸಲಾಯಿತು.
ಇದನ್ನೂ ಓದಿ – ಬಡ್ಡಿ ದಂಧೆಕೋರರ ಮನೆಗಳ ಮೇಲೆ ಶಿವಮೊಗ್ಗ ಪೊಲೀಸರ ದಾಳಿ, 217 ಚೆಕ್, ದಾಖಲೆಗಳು ಸೀಜ್
ಹೊನ್ನವಿಲೆಯಲ್ಲಿ ಜಾತ್ರೆ ಸಂಭ್ರಮ
SHIMOGA : ಹೊನ್ನವಿಲೆಯ ಗ್ರಾಮ ದೇವತೆ ಶ್ರೀ ಮುದ್ರಮ್ಮ ದೇವಿಯ ಜಾತ್ರೆ ನೆರವೇರಿತು. ಭಕ್ತರು ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಶ್ರದ್ಧಾ ಭಕ್ತಿಯಿಂದ ಪ್ರಾರ್ಥಿಸಿದರು. ದೇವಿಗೆ ನೈವೇದ್ಯ ಅರ್ಪಿಸಿ ಪೂಜೆ ಸಲ್ಲಿಸಿದರು. ಈ ಬಾರಿ ಉತ್ತಮ ಮಳೆ, ಬೆಳೆಯಾಗಲಿ ಎಂದು ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು.


