ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 16 APRIL 2024
BHADRAVATHI : ತುಂಗಾ-ಭದ್ರಾ ನದಿ ಪಾತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆ ತಡೆಗೆ ಭದ್ರಾವತಿ ತಹಶೀಲ್ದಾರ್ ಕೆ.ಆರ್.ನಾಗರಾಜು ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.
ಎಲ್ಲೆಲ್ಲಿ ನಿಷೇಧ? ಕಾರಣವೇನು?
ತಾಲೂಕಿನ ಡಣಾಯಕಪುರ, ಸಿದ್ಲೀಪುರ, ಸನ್ಯಾಸಿಕೊಡಮಗ್ಗಿ, ಮಂಗೋಟೆ, ಆನವೇರಿ, ವಡೇರಪುರ (ನಿಂಬೆಗೊಂದಿ) ಗ್ರಾಮಗಳಲ್ಲಿ ತುಂಗಾ – ಭದ್ರಾ ನದಿ ಪಾತ್ರಕ್ಕೆ ಅಕ್ರಮ ಪ್ರವೇಶವನ್ನು ನಿಷೇಧಿಸಲಾಗಿದೆ.
ಈ ಹಿಂದೆ ಇಲ್ಲಿನ ನಿಕ್ಷೇಪಗಳಲ್ಲಿ ಗಣಿಗಾರಿಕೆ ನಡೆಸಲು ಹರಾಜು ಮೂಲಕ 5 ವರ್ಷ ಅವಧಿಗೆ ವಿಲೇವಾರಿ ಮಾಡಲಾಗಿತ್ತು. ಅವಧಿ ಮುಗಿದರು ಅಕ್ರಮವಾಗಿ ಮರಳು ಗಣಿಗಾರಿಕೆ ಮುಂದುವರಿಸಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ವರದಿ ಸಲ್ಲಿಸಿದ್ದರು. ಅಲ್ಲದೆ ಇಲ್ಲಿನ ನಿಕ್ಷೇಪಗಳನ್ನು ಹರಾಜು ಮೂಲಕ ವಿಲೇಪಡಿಸಲು ಉದ್ದೇಶಿಸಲಾಗಿದೆ. ಈ ಹಿನ್ನೆಲೆ ತಹಶೀಲ್ದಾರ್ ಅವರು ಗಣಿಗಾರಿಕೆ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ – ನೆಹರೂ ರಸ್ತೆಯಲ್ಲಿ ಆಟೋ ಚಾಲಕನ ತಲೆಗೆ ದೊಣ್ಣೆಯಿಂದ ಹೊಡೆದ ಮತ್ತೊಬ್ಬ ಆಟೋ ಚಾಲಕ
LATEST NEWS
- ಅಡಿಕೆ ತೋಟದಲ್ಲಿ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಉಪನ್ಯಾಸಕರ ಮೃತದೇಹ ಪತ್ತೆ

- ತಂದೆ ಸಾವಿನಲ್ಲೂ ಪರೀಕ್ಷೆ ಬರೆದ ವಿದ್ಯಾರ್ಥಿ, ಕಾರಿನಲ್ಲಿ ಕರೆದೊಯ್ದು ಪರೀಕ್ಷಾ ಕೇಂದ್ರಕ್ಕೆ ಬಿಟ್ಟ ಅಧಿಕಾರಿ

- ಮದುವೆ ಮುಗಿಸಿ ಭದ್ರಾವತಿಯ ನಾಗತಿಬೆಳಗಲು ತಾಂಡಾದ ಮನೆಗೆ ಮರಳಿದವರಿಗೆ ಕಾದಿತ್ತು ಆಘಾತ

- ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ JDS ಕಾರ್ಯಕರ್ತರ ಸಭೆ, MLA ಮಹತ್ವದ ಸೂಚನೆ, ಏನದು?

- ATNC, ಕಮಲಾ ನೆಹರು ಕಾಲೇಜು ವಿದ್ಯಾರ್ಥಿಗಳಿಂದ ವಿಭಿನ್ನ ಮನವಿ, ಏನಿದು?

About The Editor
ನಿತಿನ್ ಆರ್.ಕೈದೊಟ್ಲು
















