ಶಿವಮೊಗ್ಗ ಲೈವ್.ಕಾಂ | BHADRAVATHI | 13 ಏಪ್ರಿಲ್ 2020
ವೈನ್ ಸ್ಟೋರ್ ಕಳ್ಳತನ ಮಾಡಿದ್ದ ಆರೋಪಿಗಳನ್ನು 24 ಗಂಟೆಯಲ್ಲೇ ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಲಾಕ್‌ಡೌನ್ ಬಳಿಕ ಮದ್ಯ ಸಿಗದೇ ಸಾವಿರಾರು ಜನ ಪರಿತಪಿಸುತ್ತಿದ್ದಾರೆ. ಕೆಲವು ಕಡೆ ಸಿಕ್ಕ ಮದ್ಯಕ್ಕೆ ನಾಲ್ಕೈದು ಪಟ್ಟು ಹಣ ಕೊಟ್ಟು ಖರೀದಿ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ವೈನ್ ಶಾಪ್‌ನಿಂದ ಮದ್ಯ ಕದ್ದು ಹಣ ಮಾಡಿಕೊಳ್ಳಲು ಮುಂದಾಗಿದ್ದ ಇಬ್ಬರು ಈಗ ಪೊಲೀಸರ ಅತಿಥಿಯಾಗಿದ್ದಾರೆ.
24 ಸಾವಿರದ ಎಣ್ಣೆ ಕದ್ದರು
ಭದ್ರಾವತಿ ತಾಲ್ಲೂಕಿನ ತಿಪ್ಲಾಪುರ ಗ್ರಾಮದ ಮಹಮ್ಮದ್ ಜುನೈದ್ (29), ಸೈಯದ್ ಬಾಷಾ (24) ಬಂಧಿತರು. ಇವರು ಏ.11ರ ರಾತ್ರಿ ಭದ್ರಾವತಿಯ ಅರಳಿಹಳ್ಳಿ ಗ್ರಾಮದ ವೈನ್ ಸ್ಟೋರ್‌ನಲ್ಲಿ 24,240 ರೂ. ಮೌಲ್ಯದ ಮದ್ಯ ಕಳ್ಳತನ ಮಾಡಿದ್ದರು.
ಸಿಕ್ಕಸಿಕ್ಕವರಿಗೆ ಎಣ್ಣೆ ಮಾರಾಟ
24 ಗಂಟೆ ಕಳೆಯುವುದರಲ್ಲಿ ಈ ಕಳ್ಳರು ಹತ್ತು ಸಾವಿರ ರುಪಾಯಿ ಮೌಲ್ಯದ ಮದ್ಯ ಮಾರಾಟ ಮಾಡಿದ್ದಾರೆ. ಈ ಕಳ್ಳನಿಂದ ಮದ್ಯ ಪಡೆದ ಸಾರ್ವಜನಿಕರು ಕುಡಿದು ಪೌಚುಗಳನ್ನು ಬಿಸಾಡಿದ್ದರು. ಇದರ ಪರಿಶೀಲನೆ ನಡೆಸಿದಾಗ ಕಳ್ಳರ ಜಾಡು ಹಿಡಿಯುವುದು ಸುಲಭವಾಯಿತು. ಬಂಧಿತರಿಂದ 14,200 ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಎಣ್ಣೆ ಕದ್ದವರ ಹಿಡಿಯಲು ಟೀಂ
ಡಿವೈಎಸ್‌ಪಿ ಸುಧಾಕರ್ ನಾಯ್ಕ್, ಸಿಪಿಐ ಮಂಜುನಾಥ್ ಮಾರ್ಗದರ್ಶನದಲ್ಲಿ ಪಿಎಸ್‌ಐ ದೇವರಾಜ್‌ಸಿಬ್ಬಂದಿಗಳಾದ ನಾಗರಾಜ್, ಆದರ್ಶ, ಉದಯ್ ಕುಮಾರ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಕೇವಲ ೨೪ ಗಂಟೆಯಲ್ಲಿ ಕಳ್ಳರನ್ನು ಅರೆಸ್ಟ್ ಮಾಡಲಾಗಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]