ಶಿವಮೊಗ್ಗ ಲೈವ್.ಕಾಂ | HOSANAGARA | 19 ಡಿಸೆಂಬರ್ 2019
ಶ್ರೀಗಂಧ ಕಳ್ಳರು DRFO ಮತ್ತು ಅರಣ್ಯ ಇಲಾಖೆ ಸಿಬ್ಬಂದಿಯ ಹತ್ಯೆಗೆ ಪ್ರಯತ್ನ ನಡೆಸಿರುವ ಭಯಾನಕ ಘಟನೆ ರಾತ್ರಿ ನಡೆದಿದೆ. ಮಾರಣಾಂತಿಕ ಹಲ್ಲೆಯಿಂದ ಅರಣ್ಯ ಇಲಾಖೆ ಸಿಬ್ಬಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹೊಸನಗರದ ಸೋನಲೆ ಅರಣ್ಯ ವಲಯದ ಉಪ ಅರಣ್ಯ ಅಧಿಕಾರಿ ಗೋವಿಂದರಾಜು ಅವರ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಡಿಆರ್’ಎಫ್ಓ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹೇಗಾಯ್ತು ಘಟನೆ?
ಸೋನಲೆಯ ಹೆಗ್ಗರಿಸಿ ಗ್ರಾಮದ ಬಳಿ ಶ್ರೀಗಂಧ ಕಳ್ಳತನದ ಕುರಿತು DRFO ಗೋವಿಂದರಾಜು ಅವರಿಗೆ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಗಂಧ ಕಳ್ಳರ ಮೇಲೆ ದಾಳಿಗೆ ಸಿಬ್ಬಂದಿಗಳ ಜೊತೆಗೆ ತೆರಳಿದ್ದರು. ಕಾರಣಗಿರಿ ಬಿಳ್ಕೋಡಿ ರಸ್ತೆ ಪಕ್ಕದಲ್ಲಿ ಜೀಪ್ ನಿಲ್ಲಿಸಿ ಶ್ರೀಗಂಧ ಕಳ್ಳರ ಪತ್ತೆಗಾಗಿ ವಾಹನ ತಪಾಸಣೆ ನಡೆಸಲಾಗುತ್ತಿತ್ತು. ಈ ವೇಳೆ ಬೈಕ್’ನಲ್ಲಿ ಬಂದ ಇಬ್ಬರು ತಪಾಸಣೆ ವೇಳೆ, ಏಕಾಏಕಿ ಅರಣ್ಯಾಧಿಕಾರಿಗಳ ಮೇಲೆ ದಾಳಿ ನಡೆಸಿದ್ದಾರೆ.

ದಾಳಿಗೇನು ಕಾರಣ?
ಬೈಕ್’ನ ಪೆಟ್ರೋಲ್ ಟ್ಯಾಂಕ್ ಮೇಲೆ ಚೀಲದಲ್ಲಿ ಸುತ್ತಿದ್ದ ವಸ್ತುವಿತ್ತು. ಅನುಮಾನಗೊಂಡ ಅರಣ್ಯಾಧಿಕಾರಿಗಳು ತಪಾಸಣೆ ನಡೆಸಲು ಮುಂದಾದರು. ಈ ವೇಳೆ ಬೈಕ್’ನಲ್ಲಿದ್ದ ಇಬ್ಬರು ಅವಾಚ್ಯವಾಗಿ ನಿಂದಿಸಿ, ಹಲ್ಲೆಗೆ ಮುಂದಾಗಿದ್ದಾರೆ ಎಂದು ಎಫ್ಐಆರ್’ನಲ್ಲಿ ದಾಖಲಿಸಲಾಗಿದೆ. ಏಕಾಏಕಿ ಮಚ್ಚಿನಿಂದ DRFO ಗೋವಿಂದರಾಜು ಅವರ ಮೇಲೆ ಹಲ್ಲೆ ನಡೆಸಲು ಆರಂಭಿಸಿದ್ದಾರೆ. ಜೊತೆಗಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಹಲ್ಲೆಕೋರರನ್ನು ತಡೆಯಲು ಯತ್ನಿಸಿದ್ದಾರೆ. ಹಲ್ಲೆಕೋರರ ನೆರವಿಗೆ ಮತ್ತೆ ಮೂರ್ನಾಲ್ಕು ಜನರು ಬಂದಿದ್ದರಿಂದ ಗೋವಿಂದರಾಜು ಅವರ ಮೇಲೆ ಮತ್ತಷ್ಟು ಗಂಭೀರವಾಗಿ ಹಲ್ಲೆ ನಡೆಸಲು ಅನುಕೂಲವಾಯಿತು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕೂಗಾಟ, ವಾಹನದ ಸದ್ದು ಉಳಿಸುತು ಪ್ರಾಣ
ಹಲ್ಲೆಯಾಗುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಜೋರಾಗಿ ಕೂಗಿಕೊಂಡಿದ್ದಾರೆ. ಈ ನಡುವೆ ರಸ್ತೆಯಲ್ಲಿ ವಾಹನಗಳ ಸದ್ದು ಕೇಳಿಸಿದೆ. ಇದರಿಂದ ಬೆದರಿದ ಹಲ್ಲೆಕೋರರು ಮಚ್ಚು ಮತ್ತು ಇತರೆ ವಸ್ತುಗಳನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇನ್ನು, ಹಲ್ಲೆಕೋರರಲ್ಲಿ ಇಬ್ಬರನ್ನು ಅರಣ್ಯ ಇಲಾಖೆ ಸಿಬ್ಬಂದಿ ಗುರುತಿಸಿದ್ದಾರೆ. ಹೆಗ್ಗರಸು ಗ್ರಾಮದ ಮೋಹನ್ ಮತ್ತು ಕುಮಾರ್ ಹಲ್ಲೆಕೋರರ ಟೀಂನದಲ್ಲಿದ್ದರು ಎಂದು ತಿಳಿದು ಬಂದಿದ್ದು ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಅರಣ್ಯಾಧಿಕಾರಿಗೆ ಮುಂದುವರೆದ ಚಿಕಿತ್ಸೆ
DRFO ಗೋವಿಂದರಾಜು ಅವರ ತಲೆಗೆ ಮಚ್ಚಿನಿಂದ ಹಲ್ಲೆ ನಡೆಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಅವರಿಗೆ ಹೊಸನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ.
ಘಟನೆ ಕುರಿತು ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | shivamoggalive@gmail.com
Sandalwood smugglers attack on DRFO in Hosanagara during a raid. DRFO has been admitted to the local hospital. Hosanagara Police have registered the case.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200