ಹೊಸನಗರದ ಬಿದನೂರು ಮಾರಿಕಾಂಬಾ ಜಾತ್ರೆಗೆ ಸಿದ್ಧತೆ ಪೂರ್ಣ, ಯಾವ್ಯಾವ ದಿನ ಏನೇನು ಕಾರ್ಯಕ್ರಮವಿದೆ?

 ಶಿವಮೊಗ್ಗ  LIVE 

ಹೊಸನಗರ: ಬಿದನೂರು (Bidanuru) ಶ್ರೀ ಮಾರಿಕಾಂಬಾ ದೇವಿಯ ಜಾತ್ರೆ ಜನವರಿ 13 ರಿಂದ ಶನಿವಾರದವರೆಗೆ 5 ದಿನ ನಡೆಯಲಿದೆ ಎಂದು ಶ್ರೀ ಮಾರಿಕಾಂಬಾ ದೇವಸ್ಥಾನ ಸಮಿತಿ ಅಧ್ಯಕ್ಷ ಎನ್.ರಮೇಶ ಉಡುಪ ಹೇಳಿದ್ದಾರೆ.

ಯಾವ್ಯಾವ ದಿನ ಏನೇನು ಕಾರ್ಯಕ್ರಮ?

ಮಂಗಳವಾರ ಬೆಳಗ್ಗೆ ಪ್ರತಿಷ್ಠಾಪನಾ ಪೂಜೆ, ಪ್ರತಿದಿನ ತಾಯಿ ಮಡಿಲು ತುಂಬುವ ಕಾರ್ಯ, ವಿಶೇಷ ಪೂಜೆ, ಜ.15ರ ರಾತ್ರಿ ಸಂಗೀತ ರಸಸಂಜೆ, ಜ.16 ರಂದು ಯಕ್ಷಗಾನ ಪ್ರದರ್ಶನ, ಜ.17 ಕೊನೆಯ ದಿನ ರಾತ್ರಿ ದೇವಿಯ ಪುರೋತ್ಸವ ಮತ್ತು ವಿಸರ್ಜನೆ ನಡೆಯಲಿದೆ ಎಂದು ತಿಳಿಸಿದ್ದಾರೆ.

Bidanuru-marikamba-jathre-from-january
₹1.25 ಕೋಟಿ ವೆಚ್ಚದಲ್ಲಿ ಶ್ರೀ ಮಾರಿಕಾಂಬಾ ದೇಗುಲದ ಪುನರ್ ಪ್ರತಿಷ್ಠಾಪನೆ ಮತ್ತು ಜೀರ್ಣೋದ್ಧಾರ ಮಾಡಲು ನಿರ್ಧರಿಸಲಾಗಿದೆ. ಜ.21 ರಂದು ಶ್ರೀದೇವಿಯ ಕಲಾ ಸಂಕೋಚ ಕಾರ್ಯಕ್ರಮದೊಂದಿಗೆ ಆರಂಭಿಸಲಾಗುವುದು. ಎನ್.ರಮೇಶ ಉಡುಪ, ಶ್ರೀ ಮಾರಿಕಾಂಬಾ ದೇವಸ್ಥಾನ ಸಮಿತಿ ಅಧ್ಯಕ್ಷ

ಇದನ್ನೂ ಓದಿ » ದಿಢೀರ್‌ ಕಟ್‌ ಆಯ್ತು ಜಿಯೋ ಸಿಗ್ನಲ್‌, ಟವರ್‌ ಬಳಿ ಹೋದ ಸಿಬ್ಬಂದಿಗೆ ಕಾದಿತ್ತು ಶಾಕ್

 

 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment