‘ಸೌದಿ ದೇಶದಲ್ಲಿ ಕೆಲಸ’, ನಂಬಿ ಮೆಸೇಜ್ ಮಾಡಿದ ಹೊಸನಗರದ ವ್ಯಕ್ತಿಗೆ ಲಕ್ಷ ಲಕ್ಷ ಮೋಸ, ಹೇಗಾಯ್ತು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

 SHIVAMOGGA LIVE NEWS 

HOSANAGARA | ಸೌದಿ ಅರೇಬಿಯಾದಲ್ಲಿ (Saudi Arabia) ಕೆಲಸ ಇದೆ ಎಂದು ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದವರನ್ನು ಸಂಪರ್ಕಿಸಿದ ಹೊಸನಗರ ವ್ಯಕ್ತಿಯೊಬ್ಬರು ಲಕ್ಷ ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ. ಆ ಚಾರ್ಜ್, ಈ ಚಾರ್ಜ್ ಎಂದು ಪದೇ ಪದೇ ಹಣ ಪಡೆದು ಕೊನೆಗೆ ಕೆಲಸವನ್ನೂ ಕೊಡದೆ, ಹಣವನ್ನೂ ಹಿಂತಿರುಗಿಸದೆ ವಂಚಿಸಿದ್ದಾರೆ.

Shimoga Nanjappa Hospital

ಘಟನೆ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

(Saudi Arabia)

ಹೇಗಾಯ್ತು ವಂಚನೆ?

ಹೊಸನಗರದ ವ್ಯಕ್ತಿಯೊಬ್ಬರು (ಹೆಸರು ಗೌಪ್ಯ) ಈ ಹಿಂದೆ ಮೊಸಾಂಬಿಕ್ ದೇಶದಲ್ಲಿ ಟ್ರಾನ್ಸ್ ಪೋರ್ಟ್ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದರು. ಅಲ್ಲಿಂದ ಹಿಂತಿರುಗಿದ್ದ ಅವರು ಹೊಸನಗರದಲ್ಲಿರುವ ಮನೆಯಲ್ಲಿ ಇದ್ದರು. ಈಚೆಗೆ ಸೌದಿ ಅರೇಬಿಯಾದ (Saudi Arabia) ಜಿದ್ದಾ ಎಂಬಲ್ಲಿ ಉದ್ಯೋಗವಕಾಶವಿದೆ ಎಂದು ಫೇಸ್ ಬುಕ್ ನಲ್ಲಿ ಪ್ರಕಟಿಸಲಾಗಿತ್ತು. ಹೊಸನಗರದ ವ್ಯಕ್ತಿ ಮೆಸೆಂಜರ್ ಮೂಲಕ ಫೇಸ್ ಬುಕ್ ನಲ್ಲಿ ಪ್ರಕಟಣೆ ನೀಡಿದವರನ್ನು ಸಂಪರ್ಕಿಸಿದ್ದಾರೆ.

(Saudi Arabia)

ನಮ್ಮದು ಪ್ರತಿಷ್ಠಿತ ಕಂಪನಿ

ಹೊಸನಗರದ ವ್ಯಕ್ತಿಯ ಮೆಸೇಜ್ ಗೆ ಪ್ರತಿಕ್ರಿಯೆ ನೀಡಿದ ವ್ಯಕ್ತಿಯೊಬ್ಬ ತನ್ನನ್ನು ಮೊಹಮ್ಮದ್ ರಫೀಕ್ ಎಂದು ಪರಿಚಯಿಸಿಕೊಂಡಿದ್ದಾರೆ. ತಮ್ಮ ಕಂಪನಿ ಹೆಸರು ಪ್ರಿನ್ಸ್ ಇಂಟರ್ ನ್ಯಾಷನಲ್. ಇದು ಅತ್ಯಂತ ಪ್ರತಿಷ್ಠಿತ ಕಂಪನಿ ಎಂದು ನಂಬಿಸಿದ್ದಾನೆ. ಸೌದಿ ಅರೇಬಿಯಾ (Saudi Arabia), ಇಂಗ್ಲೆಂಡ್, ಇಸ್ರೇಲ್, ದುಬೈ ಸೇರಿದಂತೆ ಹಲವು ದೇಶಗಳಲ್ಲಿ ಕೆಲಸ ಕೊಡಿಸುವ ಸಂಸ್ಥೆ ಎಂದು ಬಿಂಬಿಸಿದ್ದಾನೆ. ಇದನ್ನು ನಂಬಿದ ಹೊಸನಗರದ ವ್ಯಕ್ತಿ, ಮೊಹಮ್ಮದ್ ರಫೀಕ್ ಎಂಬಾತ ಕಳುಹಿಸಿದ ವಾಟ್ಸಪ್ ನಂಬರ್ ಗೆ ತಮ್ಮ ದಾಖಲಾತಿಗಳ ಪೋಟೋ ಕಳುಹಿಸಿದ್ದಾರೆ.

ಚಾರ್ಜ್ ಮೇಲೆ ಚಾರ್ಜ್

ಸೌದಿ ಅರೇಬಿಯಾದ ಜಿದ್ದಾದಲ್ಲಿ ಕೆಲಸ ಇದ್ದು, ಆ ಕೆಲಸ ಕೊಡಿಸಲು ಒಂದಷ್ಟು ಚಾರ್ಜುಗಳಾಗುತ್ತವೆ ಎಂದು ಮೊಹಮ್ಮದ್ ರಫೀಕ್ ತಿಳಿಸಿದ್ದಾನೆ. ಕಂಪನಿಯ ಚಾರ್ಜ್, ಮೆಡಿಕಲ್ ಚಾರ್ಜ್, ವೀಸಾ ಚಾರ್ಜ್, ಕುಟುಂಬ ಕರೆದೊಯ್ಯಲು ಚಾರ್ಜ್, ವಿಮಾನದ ಚಾರ್ಜ್, ವಿದೇಶದಲ್ಲಿ ಕಾರು ಡ್ರೈವಿಂಗ್ ಲೈಸೆನ್ಸ್ ಚಾರ್ಜ್ ಸೇರಿದಂತೆ ಹಲವು ಚಾರ್ಜ್ ಗಳನ್ನು ಕೊಡುವಂತೆ ಕೇಳಿದ್ದು, ಹಂತ ಹಂತವಾಗಿ ಹಣ ವಸೂಲಿ ಮಾಡಿದ್ದಾನೆ.

ಹೊಸನಗರದ ವ್ಯಕ್ತಿಯಿಂದ ಒಟ್ಟು 2.97 ಲಕ್ಷ ರೂ. ಹಣ ಪಡೆದಿದ್ದಾನೆ. ಆಮೇಲೆ ಮೊಹಮ್ಮದ್ ರಫೀಕ್ ತನ್ನ ಅಸಲಿ ವರಸೆ ತೋರಿಸಿದ್ದಾನೆ. ಅನುಮಾನಗೊಂಡ ಹೊಸನಗರದ ವ್ಯಕ್ತಿ ಹಣ ಹಿಂತಿರುಗಿಸುವಂತೆ ಕೇಳಿದ್ದಾರೆ. ಆದರೆ ಕೆಲಸವನ್ನು ಕೊಡಿಸದೆ, ಹಣವನ್ನೂ ಹಿಂತಿರುಗಿಸದೆ ಮೊಹಮ್ಮದ್ ರಫೀಕ್ ಎಂಬಾತ ವಂಚನೆ ಮಾಡಿದ್ದಾನೆ.

ಜಾಲತಾಣಗಳಲ್ಲಿ ವಂಚಕರ ಜಾಲ

ಕೆಲಸ ಹುಡುಕುತ್ತಿರುವವರನ್ನು ಸೆಳೆದು, ಹಣ ಮಾಡುವ ವಂಚಕರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದಾರೆ. ಫೇಸ್ ಬುಕ್, ಇನ್ ಸ್ಟಾಗ್ರಾಂ ಸೇರಿದಂತೆ ವಿವಿಧ ಜಾಲತಾಣಗಳ ಮೂಲಕ ಕೆಲಸದ ಜಾಹೀರಾತು ಪ್ರಕಟಿಸುತ್ತಿದ್ದಾರೆ. ಅದನ್ನು ನಂಬಿ ಸಂಪರ್ಕಿಸುವವರಿಂದ ಹಣ ವಸೂಲಿ ಮಾಡಲಾಗುತ್ತದೆ. ವಿದೇಶದಲ್ಲಿ ಕೆಲಸ, ಮನೆಯಲ್ಲೆ ಕೆಲಸ ಎಂದು ವಿವಿಧ ರೀತಿಯಲ್ಲಿ ವಂಚಿಸಲಾಗುತ್ತಿದೆ.

ಘಟನೆ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

jnnce college shimoga

ಕ್ಲಿಕ್ ಮಾಡಿ ಇದನ್ನೂ ಓದಿ ಶಿವಮೊಗ್ಗದಿಂದ ಬೆಂಗಳೂರಿಗೆ ಎಷ್ಟು ರೈಲುಗಳಿವೆ? ಯಾವೆಲ್ಲ ಸಮಯದಲ್ಲಿ ಸಂಚರಿಸುತ್ತವೆ?

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment