SHIVAMOGGA LIVE NEWS | 25 AUGUST 2023
HOSANAGARA : ನಾಡಕಚೇರಿಗೆ ದಿಢೀರ್ ಭೇಟಿ ನೀಡಿದ ಶಾಸಕ ಆರಗ ಜ್ಞಾನೇಂದ್ರ (Araga Jnanendra), ಕರ್ತವ್ಯಕ್ಕೆ ತಡವಾಗಿ ಹಾಜರಾದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಉಪ ತಹಶೀಲ್ದಾರ್ ಇಲ್ಲದಿರುವುದು ಕಂಡು ಗರಂ ಆದರು.
![]() |
ಹೊಸನಗರದ ನಗರ ನಾಡ ಕಚೇರಿಗೆ ಶಾಸಕ ಆರಗ ಜ್ಞಾನೇಂದ್ರ ಹಠಾತ್ ಭೇಟಿ ನೀಡಿದರು. ಹಾಜರಾತಿ ಪುಸ್ತಕ ತರಿಸಿಕೊಂಡು ಪರಿಶೀಲನೆ ನಡೆಸಿದರು.
ಉಪ ತಹಶೀಲ್ದಾರ್ ಇರಲಿಲ್ಲ
ಶಾಸಕ ಆರಗ ಜ್ಞಾನೇಂದ್ರ ಭೇಟಿ ವೇಳೆ ಉಪ ತಹಶೀಲ್ದಾರ್ ಅವರು ನಾಡ ಕಚೇರಿಯಲ್ಲಿ ಇರಲಿಲ್ಲ. ತಕ್ಷಣ ತಾಲೂಕು ಕಚೇರಿಗೆ ಕರೆ ಮಾಡಿ ಉಪ ತಹಶೀಲ್ದಾರ್ ಕುರಿತು ಮಾಹಿತಿ ಕೇಳಿದರು. ಅವರು ಅಲ್ಲಿಯು ಇರಲಿಲ್ಲ. ಬಹು ಹೊತ್ತಿನ ಬಳಿಕ ಉಪ ತಹಶೀಲ್ದಾರ್ ಅವರು ಕಚೇರಿ ಆಗಮಿಸಿದರು. ಇದನ್ನು ಕಂಡು ಶಾಸಕ ಆರಗ ಜ್ಞಾನೇಂದ್ರ ಗರಂ ಆದರು. ನಿಗದಿತ ಸಮಯಕ್ಕೆ ಕಚೇರಿಗೆ ಅಗಮಿಸಬೇಕು ಎಂದು ತಾಕೀತು ಮಾಡಿದರು.
ಇದನ್ನೂ ಓದಿ- ಶಿವಮೊಗ್ಗದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದರೆ ಮನೆಗೆ ನೊಟೀಸ್, ಯೋಜನೆ ಜಾರಿಗೆ ದಿನಾಂಕ ಫಿಕ್ಸ್
ಇವತ್ತಿಗೆ ಇವೆಲ್ಲ ಕೊನೆಯಾಗಬೇಕು
ಜನರು ಅಧಿಕಾರಿಗಳಿಗಾಗಿ ಕಾಯಬಾರದು. ನಿಗದಿತ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗಿ ಜನರ ಕೆಲಸ ಮಾಡಬೇಕು. ಇನ್ನು, ಜನರ ಕೆಲಸಕ್ಕೆ ಹಣ ಪಡೆಯುತ್ತಿರುವ ಕುರಿತು ದೂರುಗಳು ಬರುತ್ತಿವೆ. ಇವೆಲ್ಲವು ಇವತ್ತಿಗೆ ಕೊನೆಯಾಗಬೇಕು ಎಂದು ಸೂಚನೆ ನೀಡಿದರು.
ನಗರ ಆಸ್ಪತ್ರೆಗು ಭೇಟಿ
ಇದೆ ವೇಳೆ ನಗರ ಆಸ್ಪತ್ರೆಗು ಶಾಸಕ ಆರಗ ಜ್ಞಾನೇಂದ್ರ ಭೇಟಿ ನೀಡಿ ಪರಿಶೀಲಿಸಿದರು. ಆಸ್ಪತ್ರೆ ಸಿಬ್ಬಂದಿ, ರೋಗಿಗಳ ಜೊತೆಗೆ ಕೆಲವು ಹೊತ್ತು ಚರ್ಚೆ ನಡಸಿ ಅಭಿಪ್ರಾಯ ಸಂಗ್ರಹಿಸಿದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200