ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 3 JANUARY 2023
RIPPONPETE : ಪಟ್ಟಣದಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆಗೆ ಬ್ರೇಕ್ ಹಾಕಿ, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಬಿಗಿ ಕ್ರಮ ಕೈಗೊಂಡಿದೆ. ರಿಪ್ಪನ್ ಪೇಟೆಯಲ್ಲಿ ನೂತನ ಪಾರ್ಕಿಂಗ್ ನಿಯಮ (parking rule) ಜಾರಿಗೊಳಿಸಲಾಗಿದೆ.
ರಿಪ್ಪನ್ ಪೇಟೆಯ ನಾಲ್ಕು ರಸ್ತೆಯ ಎರಡು ಬದಿಯಲ್ಲಿ ದಿನ ಬಿಟ್ಟು ದಿನ ಪಾರ್ಕಿಂಗ್ (parking rule) ಮಾಡುವಂತೆ ಸೂಚಿಸಲಾಗಿದೆ. ವಾಹನ ಸವಾರರು ಕಡ್ಡಾಯವಾಗಿ ಈ ನಿಯಮ ಪಾಲಿಸಬೇಕು. ಇಲ್ಲವಾದಲ್ಲಿ ಪೊಲೀಸ್ ಇಲಾಖೆ ವತಿಯಿಂದ ದಂಡ ಹಾಕಲು ನಿರ್ಧರಿಸಲಾಗಿದೆ.
ಇದನ್ನೂ ಓದಿ – ಇನ್ಮುಂದೆ ಎಲ್ಲೆಂದರಲ್ಲಿ ಸಿಟಿ ಬಸ್ ನಿಲ್ಲಿಸುವಂತಿಲ್ಲ, ಶಿವಮೊಗ್ಗದಲ್ಲಿ 117 ಬಸ್ ಸ್ಟಾಪ್ ಗುರುತಿಸಿ ಅಧಿಸೂಚನೆ ಪ್ರಕಟ
ಇನ್ಸ್ ಪೆಕ್ಟರ್ ಗಿರೀಶ್, ಪಿಎಸ್ಐ ಶಿವಾನಂದ ಅವರ ನೇತೃತ್ವದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ರಿಪ್ಪನ್ ಪೇಟೆಯಲ್ಲಿ ಈವರೆಗೂ ರಸ್ತೆಯ ಎರಡು ಬದಿ ವಾಹನಗಳ ಪಾರ್ಕಿಂಗ್ ಮಾಡಲಾಗುತ್ತಿತ್ತು. ಅಡ್ಡಾದಿಡ್ಡಿ ವಾಹನ ನಿಲ್ಲಿಸುವುದರಿಂದ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ತೊಂದರೆಯಾಗಿತ್ತು. ಇದನ್ನು ನಿಯಂತ್ರಿಸುವ ಸಲುವಾಗಿ ಪೊಲೀಸ್ ಇಲಾಖೆ ಹೊಸ ಪಾರ್ಕಿಂಗ್ ನೀತಿ ಜಾರಿಗೊಳಿಸಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422