ಪಿಯುಸಿ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು, ನಾಪತ್ತೆಯಾಗಿ ಮೂರು ದಿನದ ಬಳಿಕ ಮನೆ ಹತ್ತಿರದ ಬಾವಿಯಲ್ಲಿ ಶವ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | ರಿಪ್ಪನ್’ಪೇಟೆ | 26 ಸೆಪ್ಟೆಂಬರ್ 2019

ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಆಕೆಯ ಮೃತದೇಹ ಊರಿನ ಬಾವಿಯಲ್ಲಿ ಪತ್ತೆಯಾಗಿದೆ. ವಿದ್ಯಾರ್ಥಿನಿಯನ್ನು ಕೊಲೆಗೈದು ಮೃತದೇಹವನ್ನು ಬಾವಿಗೆ ತಂದು ಹಾಕಿರುವ ಕುರಿತು ಶಂಕೆ ವ್ಯಕ್ತವಾಗಿದೆ.

ರಿಪ್ಪನ್’ಪೇಟೆ ಸರ್ಕಾರಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮಾದಾಪುರ ಗ್ರಾಮದ ಪೂಜಾ (17) ಮೃತಳು. ಭಾನುವಾರ ಸಂಜೆಯಿಂದ ಪೂಜಾ ಕಾಣೆಯಾಗಿದ್ದಳು. ಮನೆಯವರು ಎಲ್ಲಿಯೆ ಹುಡುಕಾಡಿದರು ಪೂಜಾ ಕುರಿತು ಸುಳಿವು ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಪೂಜಾಳ ಸಹೋದರ ಗೋಪಾಲಕೃಷ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಅನುಮಾನಕ್ಕೆ ಕಾರಣವಾಯ್ತು ಬಾವಿ

ಪೂಜಾಗಾಗಿ ಕುಟುಂಬದವರು ಮಾತ್ರವಲ್ಲ ಇಡಿ ಊರಿನವರು ಹುಡುಕಾಟ ನಡೆಸಿದ್ದರು. ಮನೆಯ ಕೂಗಳತೆ ದೂರದಲ್ಲಿದ್ದ ಸರ್ಕಾರಿ ಬಾವಿಯಲ್ಲಿ ಪಾತಾಳಗರಡಿ ಹಾಕಿ ಶೋಧಿಸಿದ್ದರು. ಅರಣ್ಯ ಪ್ರದೇಶದಲ್ಲೂ ಹುಡುಕಾಟ ನಡೆಸಿದ್ದರು. ಆದರೆ ಬುಧವಾರ ಬೆಳಗ್ಗೆ ಅದೆ ಸರ್ಕಾರಿ ಬಾವಿಯಲ್ಲಿ ಪೂಜಾಳ ಮೃತದೇಹ ಪತ್ತೆಯಾಗಿದೆ. ಇದು ಅನುಮಾನಕ್ಕೆ ಕಾರಣವಾಗಿದೆ.

ಹೆಚ್ಚುವರಿ ರಕ್ಷಣಾಧಿಕಾರಿ ಶೇಖರ್, ಸಾಗರ ವಿಭಾಗದ ಎಎಸ್’ಪಿ ಯತೀಶ್, ಸಿಪಿಐ ಗುರಣ್ಣ ಹೆಬ್ಬಾಳ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200

ಸುದ್ದಿಗಾಗಿ ಕರೆ ಮಾಡಿ – 9964634494

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment