ಹೊಸನಗರದ ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ, ಯಾವ್ಯಾವ ದಿನ ಏನೇನು ಕಾರ್ಯಕ್ರಮವಿರಲಿದೆ?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 15 APRIL 2024

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

HOSANAGARA : ಶ್ರೀ ರಾಮಚಂದ್ರಾಪುರ ಮಠದಲ್ಲಿ ಇಂದಿನಿಂದ ರಾಮೋತ್ಸವ ಆರಂಭವಾಗಲಿದೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ದೊಡ್ಡ ಸಂಖ್ಯೆಯ ಭಕ್ತರು ಭಾಗವಹಿಸಲಿದ್ದಾರೆ. ಪೀಠಾಧಿಪತಿ ‍ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಮಾರ್ಗದರ್ಶನದಲ್ಲಿ ರಾಮೋತ್ಸವದ ವಿಶೇಷ ಧಾರ್ಮಿಕ ಮತ್ತು ಸಾಂಸ್ಕ್ರೃತಿಕ ಕಾರ್ಯಕ್ರಮಗಳು ನಡೆಯಲಿವೆ. 

ರಾಮಾಯಣ ಪಾರಾಯಣದೊಂದಿಗೆ ಚಾಲನೆ

ಈಗಾಗಲೇ ಏ.9 ರಂದು ವಾಲ್ಮೀಕಿ ರಾಮಾಯಣ ಪಾರಾಯಣದೊಂದಿಗೆ ರಾಮೋತ್ಸವಕ್ಕೆ ಚಾಲನೆ ನೀಡಲಾಗಿದೆ. ಏ. 19 ರವರೆಗೆ ನಡೆಯಲಿದೆ. ಏ. 15ರಂದು ರಾಘವೇಶ್ವರಭಾರತೀ ಶ್ರೀ ಪುರಪ್ರವೇಶ ಜರುಗಲಿದೆ. ಸಂಜೆ ದೀಪ ಮಾಲಿಕೆ ಕಾರ್ಯಕ್ರಮ ನಡೆಯಲಿದೆ. ಏ.16ರಂದು ಅಖಂಡ ಭಜನೆ, ಪೂಗ ಪೂಜೆ ಮತ್ತು ಪುಷ್ಪ ರಥೋತ್ಸವ, ರಾತ್ರಿ 8 ಗಂಟೆಗೆ ಮಾರುತಿ ಪ್ರತಾಪ ಯಕ್ಷಗಾನ ಆಯೋಜಿಸಲಾಗಿದೆ. 

ಏ. 17ರಂದು ರಾಮಜನ್ಮೋತ್ಸವ, ಸೀತಾಕಲ್ಯಾಣೋತ್ಸವ, ರಾಮಲೀಲಾ ಕಾರ್ಯಕ್ರಮ ಮತ್ತು ಶ್ರೀಮನ್ಮಹಾರಥೋತ್ಸವ ನಡೆಯಲಿದೆ. ಏ.18 ರಂದು ಶ್ರೀರಾಮ ಸಾಮ್ರಾಜ್ಯ ಪಟ್ಟಾಭಿಷೇಕ, ಭಜನಾಮಂಗಲ, ಆಶೀರ್ವಚನ, ಮಂತ್ರಾಕ್ಷತೆ ನಡೆಯಲಿದೆ. ಅಂದು ರಾವಣ ದಹನ ಮಾಡಲಾಗುತ್ತದೆ. ಈ ಬಾರಿ 20 ಕೈಗಳ ರಾವಣನ ದಹನಕ್ಕೆ ವ್ಯವಸ್ಥೆಯಾಗಿದೆ. ಏ.19ರಂದು ಅಂಕುರ ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ ಎಂದು ರಾಮೋತ್ಸವ ಸೇವಾ ಸಮಿತಿ ಅಧ್ಯಕ್ಷ ಸೀತಾರಾಮ ಶಿವಮೊಗ್ಗ ತಿಳಿಸಿದ್ದಾರೆ.

ಇದನ್ನೂ ಓದಿ – ಶಕ್ತಿ ದೇವತೆ ಸಮ್ಮುಖದಲ್ಲಿ ಬಿ.ಫಾರಂಗೆ ಪೂಜೆ, ಇವತ್ತು ಗೀತಾ ಶಿವರಾಜ್‌ ಕುಮಾರ್‌ ನಾಮಪತ್ರ ಸಲ್ಲಿಕೆ

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment