ಶಿವಮೊಗ್ಗ ಲೈವ್.ಕಾಂ | SHIMOGA NEWS | 7 NOVEMBER 2020
ಕಸ್ತೂರಿ ರಂಗನ್ ವರದಿ, ಅಕೇಶಿಯಾ ನೆಡುತೋಪು, ಭೂ ಸುಧಾರಣಾ ಕಾಯ್ದೆ ವಿರೋಧಿಸಿ ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಎಂ.ಮಂಜುನಾಥಗೌಡ ನೇತೃತ್ವದಲ್ಲಿ ತೀರ್ಥಹಳ್ಳಿಯಲ್ಲಿ ಪಾದಯಾತ್ರೆ ನಡೆಸಲಾಗುತ್ತಿದೆ. ರೈತ ಕಲ್ಯಾಣ ನಡಿಗೆ ಹೆಸರಿನಲ್ಲಿ ಆರಂಭವಾಗಿರುವ ಮೂರು ದಿನದ ಪಾದಯಾತ್ರೆಗೆ ಮಾಜಿ ಶಾಸಕರಾದ ಮಧು ಬಂಗಾರಪ್ಪ ಮತ್ತು ಬೇಳೂರು ಗೋಪಾಲಕೃಷ್ಣ ಚಾಲನೆ ನೀಡಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಬಿದರಗೋಡಿನ ಶ್ರೀರಾಮ ಮಂದಿರದ ಆವರಣದಲ್ಲಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಬಳಿಕ ಮಾತನಾಡಿದ ಮುಖಂಡರು ಕಸ್ತೂರಿ ರಂಗನ್ ವರದಿ, ಮಲೆನಾಡಿಗೆ ಕಂಟವಾಗಿರುವ ಅಕೇಶಿಯ ಪ್ಲಾಂಟೇಶನ್, ಭೂ ಸುಧಾರಣಾ ಕಾಯ್ದೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಯಾರೆಲ್ಲ ಏನೆಲ್ಲ ಮಾತನಾಡಿದರು?
ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ
ರೈತಪರ ಹೋರಾಟ ಎಂದು ಬೂಟಾಟಿಕೆ ಮಾತನಾಡುವ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ಮಲೆನಾಡಿನಲ್ಲಿ ರೈತಪರ ಕಾಳಜಿ ವಹಿಸಿ ಹೋರಾಡಿದವರೆಂದರೆ ಎಸ್.ಬಂಗಾರಪ್ಪ ಮತ್ತು ಕಾಗೋಡು ತಿಮ್ಮಪ್ಪ ಮಾತ್ರ. ಈ ಕಸ್ತೂರಿ ರಂಗನ್ ವರದಿ ಮಲೆನಾಡ ರೈತರಿಗೆ ಮರಣ ಶಾಸನವಾಗಿದೆ. ಮಲೆನಾಡ ರೈತರ ಬದುಕನ್ನು ಸರ್ವನಾಶ ಮಾಡಲು ಹೊರಟಿರುವ ಈ ಸರ್ಕಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಮಗನ ಲೂಟಿ ಹೆಚ್ಚಾಗಿದೆ ಎಂದು ಆರೋಪಿಸಿದರು.
ಮಾಜಿ ಶಾಸಕ ಮಧು ಬಂಗಾರಪ್ಪ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಕೈಯಲ್ಲಿವೆ ಎಂಬ ಅಹಂ ಬಜೆಪಿಯವರಿಗಿದೆ. ಮಾನ ಮರ್ಯಾದೆ ಇದ್ದಿದ್ದೆ ಆದರೆ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಬೇಕು. ಬಂಗಾರಪ್ಪ, ಕಾಗೋಡು ತಿಮ್ಮಪ್ಪ ಅವರು ಮಲೆನಾಡಿನ ರೈತರಿಗೆ ಶಕ್ತಿ ತುಂಬಿದರು. ಈಗ ಮಲೆನಾಡನ್ನು, ಇಲ್ಲಿನ ರೈತರನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಹಾಗಾಗಿ ಕಸ್ತೂರಿ ರಂಗನ್ ವರದಿ, ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಿಚಾರದಲ್ಲಿ ಪ್ರತಿಯೊಬ್ಬರು ಪಕ್ಷಾತೀತವಾಗಿ ಹೋರಾಡಬೇಕಾಗಿದೆ.
ಆರ್.ಎಂ.ಮಂಜುನಾಥ ಗೌಡ
ಭೂಮಿಗಾಗಿ ಹೋರಾಟ ಮಾಡಿದ ಶಾಂತವೇರಿ ಗೋಪಾಲ ಗೌಡ, ಸದಾಶಿವರಾಯರಂತಹ ಮಹಾನ್ ವ್ಯಕ್ತಿಗಳನ್ನು ನೆನೆಸಿಕೊಳ್ಳಬೇಕು. ನಮ್ಮ ಈ ಹೋರಾಟವನ್ನು ಯಾರೂ ಹತ್ತಿಕ್ಕಲು ಸಾಧ್ಯವಿಲ್ಲ. ನಾವು ಹೆದರುವುದಿಲ್ಲ. ಸಂಪೂರ್ಣ ನಾಚಿಕೆಗೇಡಿನ ಸರ್ಕಾರವಿದು. ನಾಚಿಕೆ ಇಲ್ಲದ ಸರ್ಕಾರಗಳು ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಬಹುರಾಷ್ಟ್ರೀಯ ಕಂಪನಿಗೆ ಮಲೆನಾಡನ್ನು ಮಾರಲು ಹೊರಟಿದೆ. ಕೆಲವು ಹೋರಾಟಗಾರರು, ಹಾರಾಟಗಾರರು ಗೋಪಾಲಗೌಡರ ಹೆಸರನ್ನು ಹೇಳಿಕೊಂಡು ಚುನಾವಣೆಯಲ್ಲಿ ಗೆದ್ದಿದ್ದಾರಷ್ಟೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಮುಖಂಡ ಪದ್ಮನಾಭ, ಬಾಳೆಹಳ್ಳಿ ಪ್ರಭಾಕರ್, ವಿಜಯದೇವ್, ಕಿರಣ್ ಕುಮಾರ್, ಶಿಮುಲ್ ಮಾಜಿ ಅಧ್ಯಕ್ಷ ವಿದ್ಯಾಧರ್, ಆನಂದ್, ಪ್ರಶಾಂತ್ ಸಾಗರ್, ಯೋಗಿಶ್, ಕೆಳಕೆರೆ ದಿವಾಕರ್, ಜಿ.ಪಂ. ಮಾಜಿ ಸದಸ್ಯ ಡಾ. ಟಿ.ಎಲ್. ಸುಂದರೇಶ್, ತಾ.ಪಂ. ಮಾಜಿ ಅಧ್ಯಕ್ಷೆ ಜೀನಾ ವಿಕ್ಟರ್ ಡಿಸೋಜ, ತಾ.ಪಂ. ಮಾಜಿ ಸದಸ್ಯರಾದ ಕಟ್ಟೆಹಕ್ಲು ಕಿರಣ್, ಮಾಳೂರು ಉಮೇಶ್, ಕೊಲ್ಲೂರಯ್ಯ, ಮಟ್ಟಿನಮನೆ ರಾಮಚಂದ್ರ, ಬಿ.ಆರ್.ರಾಘವೇಂದ್ರ ಶೆಟ್ಟಿ, ಹೊರಬೈಲು ರಾಮಕೃಷ್ಣ, ಸುಷ್ಮಾ ಸಂಜಯ್, ಜಯಂತಿ ಕೃಷ್ಣಮೂರ್ತಿ ಸೇರಿದಂತೆ ಹಲವರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]