ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಸಾಗರ: ಮಾವ, ಸೊಸೆ ಬೈಕಿನಲ್ಲಿ ತೆರಳುವಾಗ ಅಡ್ಡಗಟ್ಟಿ ಕಣ್ಣಿಗೆ ಖಾರದ ಪುಡಿ ಎರಚಿ ಸೊಸೆ ಶೃತಿ ತಲೆಗೆ ರಾಡ್ನಿಂದ ಹೊಡೆದ (Attacking) ಪ್ರಕರಣ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಸೊರಬ ತಾಲೂಕು ತತ್ತೂರು ಗ್ರಾಮದ ಗೋವಿಂದ (24) ಮತ್ತು ಕೃತ್ಯಕ್ಕೆ ಕುಮ್ಮಕ್ಕು ನೀಡಿದ ಕಿರಣ್ ಕುಮಾರ್ (32) ಬಂಧಿತರು.
ಏನಿದು ಪ್ರಕರಣ?
ಶೃತಿ ಅವರು ಸೊರಬದಲ್ಲಿ ಕೆಲಸ ಮುಗಿಸಿ ವಾಪಸ್ ಬರುತ್ತಿದ್ದರು. ಅವರ ಮಾವ ಶೃತಿ ಅವರನ್ನು ಬೈಕಿನಲ್ಲಿ ಮನೆಗೆ ಕರೆದುಕೊಂಡು ಹೋಗುತ್ತಿದ್ದರು. ಮರದ ಮರೆಯಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ ದಿಢೀರ್ ರಸ್ತೆಗೆ ಬಂದ್ದು ಬೈಕ್ ಅಡ್ಡಗಟ್ಟಿದ್ದ. ಜರ್ಕಿನ್ ಧರಿಸಿದ್ದ ಆತ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದ. ಶೃತಿ ಅವರ ಮಾವನ ಕಣ್ಣಿಗೆ ಖಾರದ ಪುಡಿ ಎರಚಿ, ರಾಡ್ನಿಂದ ಶೃತಿ ತಲೆಗೆ ಹೊಡೆದಿದ್ದ. ಘಟನೆಗೆ ಸಂಬಂಧಿಸಿದಂತೆ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ತನಿಖೆಗಾಗಿ ಪೊಲೀಸ್ ಅಧೀಕ್ಷಕರ ನಿಖಿಲ್.ಬಿ ಅವರ ಮಾರ್ಗದರ್ಶನದಲ್ಲಿ ಸಾಗರ ಡಿವೈಎಸ್ಪಿ ಕೇಶವ ಕೆ.ಇ, ಸಾಗರ ಗ್ರಾಮಾಂತರ ಇನ್ಸ್ಪೆಕ್ಟರ್ ಸಂತೋಷ್ ಶೆಟ್ಟಿ ನೇತೃತ್ವದಲ್ಲಿ ತನಿಖೆ ನಡೆಸಲಾಯಿತು. ಪಿಎಸ್ಐ ಪ್ರವೀಣ್ ಎಸ್.ಪಿ, ಸಿಡಿಆರ್ ಸೆಲ್ ಶಿವಮೊಗ್ಗದ ಸಿಬ್ಬಂದಿ ಇಂದ್ರೇಶ, ಗುರು, ಎ.ಎಸ್.ಐ ಸಿದ್ದರೂಡ, ಪ್ರಶಾಂತ್, ಪರಶುರಾಮ್, ತಾಹಿರ್, ಉಮೇಶ್ ಲಮಾಣಿ, ಹರ್ಷ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಮನೆಯೊಳಗೆ ನುಗ್ಗಿ ವೃದ್ಧೆಯ ಕೈಲಿದ್ದ ರೋಲ್ಡ್ ಗೋಲ್ಡ್ ಬಳೆ ಕದ್ದೊಯ್ದ ಕಳ್ಳರು..!
LATEST NEWS
- ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ವ್ಯಕ್ತಿಗೆ ಬಿಸಿ ಮುಟ್ಟಿಸಿದ ಅಕ್ಕ ಪಡೆ, ಆಗಿದ್ದೇನು?

- ದುರ್ಗಿಗುಡಿಯಲ್ಲಿ ವೈಭವದ ರಥೋತ್ಸವ, ಈ ಬಾರಿ ಉತ್ಸವ ಬೆಳಗ್ಗೆ ನಡೆದಿದ್ದೇಕೆ?

- ₹1,00,000 ಲಂಚದ ಹಣದೊಂದಿಗೆ ಲೋಕಾಯುಕ್ತರಿಗೆ ಸಿಕ್ಕಿಬಿದ್ದ ಅಧಿಕಾರಿ, ಮಧ್ಯವರ್ತಿ

- ಸರಕು ರೇಟ್ ಕುಸಿತ, ಉಳಿದ ಮಾದರಿ ಅಡಿಕೆ ರೇಟ್ ಎಷ್ಟಿದೆ? | 2 ಮಾರ್ಚ್ 2026

- ಮಾರಿಕಾಂಬ ಜಾತ್ರೆಯಲ್ಲಿ ಕಳೆದು ಹೋದ ವೃದ್ಧೆ, ಪತ್ತೆ ಮಾಡಿ ಮನೆಗೆ ಬಿಟ್ಟು ಬಂದ ಪೊಲೀಸ್, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು





