ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SAGARA NEWS | 1 ಅಕ್ಟೋಬರ್ 2020
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಬೆಳೆ ನಾಶ ಮಾಡುತ್ತಿದ್ದ 36 ಮಂಗಗಳಿಗೆ ವಿಷವುಣಿಸಿ ಹತ್ಯೆ ಮಾಡಿದ ಐವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಸಾಗರ ತಾಲೂಕು ಆನಂದಪುರ ಸಮೀಪದ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಪ್ಪಳಿ ಕಾಡಿನಲ್ಲಿ ಘಟನೆ ನಡೆದಿದೆ.
ಐವರು ಅರೆಸ್ಟ್ ಆಗಿದ್ದು ಹೇಗೆ?
ಮಂಗಗಳಿಗೆ ವಿಷವುಣಿಸಿ ಹತ್ಯೆ ಮಾಡಿ, ಅವುಗಳ ಮೃತದೇಹವನ್ನು ಎಸೆಯಲು ಆಗಮಿಸಿದ್ದ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬಂಧಿತರಿಂದ ಒಂದು ಕಾರು, ಟಾಟಾ ಏಸ್ ವಾಹನವನ್ನು ವಶಕ್ಕೆ ಪಡೆಯಲಾಗಿದೆ.
ಯಾರನ್ನೆಲ್ಲ ಬಂಧಿಸಲಾಗಿದೆ?
ತ್ಯಾಗರ್ತಿಯ ವಿಶ್ವನಾಥ್ (32), ದಸ್ತಗಿರ್ ಸಾಬ್ (40), ಲಾವಿಗೆರೆ ಲಂಬೋದರ (25), ಅಭಿಷೇಕ್ (24), ದಾವಣಗೆರೆಯ ಸಂಜೀವ್ ಶೇಟ್ ಎಂಬುವವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಜಾಮೀನಿನ ಮೇಲೆ ಐವರನ್ನು ಬಿಡುಗಡೆ ಮಾಡಲಾಗಿದೆ.
ಮರಣೋತ್ತರ ಪರೀಕ್ಷೆ, ಅಂತ್ಯಕ್ರಿಯೆ
ಮರಿಗಳು ಸೇರಿದಂತೆ ವಿವಿಧ ವಯೋಮಾನದ 36 ಮಂಗಗಳಿಗೆ ವಿಷವುಣಿಸಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಎಲ್ಲ ಮಂಗಗಳ ಮರೋಣತ್ತರ ಪರೀಕ್ಷೆ ನಡೆಸಿದರು. ರಾಷ್ಟ್ರೀಯ ಹೆದ್ದಾರಿ 206ರ ಸ್ವಲ್ಪ ದೂರದಲ್ಲಿ ಅರಣ್ಯ ಇಲಾಖೆ ಸಮೂಹಿಕ ಅಂತ್ಯಕ್ರಿಯೆ ನೆರವೇರಿಸಿತು.
ಸಾಗರ ಎಸಿಎಫ್ ಶ್ರೀಧರ್, ರಾಜೇಶ್ ನಾಯ್ಕ, ಚೋರಡಿ ವಿಭಾಗದ ಆರ್‍ಎಫ್‍ಓ ಮೋಹನ್, ಅರಣ್ಯಾಧಿಕಾರಿಗಳಾದ ಇಸ್ಮಾಯಿಲ್, ರಾಘವೇಂದ್ರ ತಗ್ಗಿನ್, ಮಂಜುನಾಥ, ಚಂದ್ರಶೇಖರ್, ಎಂ.ಆರ್.ಅಶೋಕ್, ಭದ್ರೇಶ್, ಶಿವನಗೌಡ ಬಿರಾದಾರ್, ಸಂತೋಷ್ ನಾಯ್ಕ, ಪ್ರದೀಪ್ ಅವರು ಕಾರ್ಯಾಚರಣೆಯಲ್ಲಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]