ಮಳೆಗಾಲದಲ್ಲಿ ಕ್ವಾರಿ ನಿಲ್ಲಿಸಿ ಅಂದಿದ್ದಕ್ಕೆ ಮನೆಗೆ ನುಗ್ಗಿ ಹಲ್ಲೆ, ರಸ್ತೆಯಲ್ಲಿ ಅಡ್ಡಗಟ್ಟಿ ಹೆಲ್ಮೆಟ್‌ನಿಂದ ಅಟ್ಯಾಕ್‌

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS
ಸಾಗರ: ಅರಣ್ಯ ಜಾಗದಲ್ಲಿ ನಡೆಸುತ್ತಿರುವ ಕ್ವಾರಿಯಿಂದ (quarry) ಓಡಾಡುವ ಲಾರಿಗಳಿಂದ ಮಳೆಗಾಲದಲ್ಲಿ ಜನರಿಗೆ ತೊಂದರೆ ಉಂಟಾಗಲಿದೆ ಎಂದು ತಿಳಿಸಿದ್ದಕ್ಕೆ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ.
➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ಮಳೆಗಾಲದಲ್ಲಿ ಕ್ವಾರಿ ನಿಲ್ಲಿಸಿ ಎಂದು ಸಿರುಗುಪ್ಪದ ಈಶ್ವರಪ್ಪಗೌಡ, ಸದಾನಂದಗೌಡ, ದೇವರಾಜ ಎಂಬುವವರು ಮನವಿ ಮಾಡಿದ್ದರು. ಹಾಗಾಗಿ ಈಶ್ವರಪ್ಪ ಗೌಡ ಅವರ ಮನೆಗೆ ನುಗ್ಗಿದ ಕೆಲವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

https://chat.whatsapp.com/JPJ0lTQsTKf365Fqu6Q7cd

ಇನ್ನು, ಪೊಲೀಸರು ಬರಲು ತಿಳಿಸಿದ್ದರಿಂದ ತೆರಳುತ್ತಿದ್ದ ದೇವರಾಜ ಅವರಿಗೆ ಐಗಿನಬೈಲು ಸಮೀಪ ಅಡ್ಡಗಟ್ಟಿ ಹೆಲ್ಮೆಟ್‌ನಿಂದ ಹೊಡೆದು ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಆನಂದಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಇದನ್ನೂ ಓದಿ » ಕತ್ತರಿಯಿಂದ ಇರಿದು ಅಳಿಯನನ್ನು ಕೊಂದ ಮಾವ, ಏನಿದು ಘಟನೆ?

Leave a Comment