ಖಾಲಿ ಜಾಗದಲ್ಲಿ ಮದ್ಯ ಸೇವನೆಗೆ ಅಕ್ಷೇಪ, ಮನೆಗೆ ನುಗ್ಗಿ ಚಾಕು ಇರಿತ

SHIVAMOGGA LIVE NEWS | SAGARA | 29 ಜೂನ್ 2022

ಖಾಲಿ ಜಾಗದಲ್ಲಿ ಮದ್ಯ ಸೇವನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಮನೆಗೆ ನುಗ್ಗಿ ವ್ಯಕ್ತಿಯೊಬ್ಬರಿಗೆ ಚಾಕು ಇರಿಯಲಾಗಿದೆ. ಕುಟುಂಬದವರ ಮುಂದೆ ಚಾಕು ಇರಿದು, ಕೊಲೆ ಬೆದರಿಕೆ ಒಡ್ಡಲಾಗಿದೆ ಎಂದು ಆರೋಪಿಸಲಾಗಿದೆ.

Shimoga Nanjappa Hospital

ಸಾಗರದ ಕುಗ್ವೆ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಸುರೇಶ್ ಎಂಬುವವರಿಗೆ ಚಾಕು ಇರಿದಿದ್ದು, ಎಡಗೈಗೆ ಗಾಯವಾಗಿದೆ.

ಏನಿದು ಪ್ರಕರಣ?

ಸುರೇಶ್ ಅವರ ಮನೆ ಪಕ್ಕದ ಖಾಲಿ ಜಾಗದಲ್ಲಿ ಮೂವರು ಯುವಕರು ಮದ್ಯಾಹ್ನ ಮದ್ಯ ಸೇವನೆ ಮಾಡುತ್ತಿದ್ದರು. ಇದನ್ನು ಗಮನಿಸಿದ ಸುರೇಶ್ ಅವರು ಮದ್ಯೆ ಸೇವನೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಹಾಗಾಗಿ ಮೂವರು ಯುವಕರು ಸ್ಥಳದಿಂದ ತೆರಳಿದ್ದರು.

ರಾತ್ರಿ ಸುರೇಶ್ ಅವರ ಮನೆಗೆ ದಿಢೀರ್ ಬಂದ ಮೂವರು ಯುವಕರು, ಬಾಗಿಲು ಒದ್ದು ಒಳ ನುಗ್ಗಿದ್ದಾರೆ. ಸುರೇಶ್ ಅವರ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯಿಂದ ಸುರೇಶ್ ಅವರ ಎಡಗೈಗೆ ಗಾಯವಾಗಿದೆ. ಸುರೇಶ್ ಅವರ ತಂದೆ ಮತ್ತು ಹೆಂಡತಿ ಜಗಳ ಬಿಡಿಸಿದ್ದಾರೆ. ಈ ವೇಳೆ ಮೂವರು ಯುವಕರು ಕೊಲೆ ಬೆದರಿಕೆ ಒಡ್ಡಿದ್ದಾರೆ ಎಂದು ಆಪಾದಿಸಲಾಗಿದೆ.

ಘಟನೆ ಸಂಬಂಧ ಸಿರಿವಂತೆಯ ರವಿ, ಕಾರ್ಗಲ್’ನ ತೇಜಸ್ ನಾಯರ್, ಗಣೇಶ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ. ಸಾಗರ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ – ಭದ್ರಾವತಿ ಬಸ್ ನಿಲ್ದಾಣದ ಮುಂದೆ ಬೆಳಗಿನ ಜಾವ ದ್ವಿಚಕ್ರ ವಾಹನ ಕಳ್ಳತನ

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ಚಿತ್ರದ ವಿವರಣೆ
Shaki Toyota, Shivamogga
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : June 29, 2022 at 9:54 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಜೂನ್ 29, 2022

Leave a Comment