ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 21 ಸೆಪ್ಟೆಂಬರ್ 2019
ಸಾಗರ ತಾಲೂಕಿನ ಬಚ್ಚಗಾರ ಗ್ರಾಮದ ಮನೆಯೊಂದರಲ್ಲಿ ಕಳ್ಳನಿಗೆ ಒಡವೆ, ಹಣ ಸಿಗದ ಕಾರಣ ಮಾವಿನ ಮಿಡಿ ಉಪ್ಪಿನಕಾಯಿಯನ್ನೇ ಕದ್ದೊಯ್ದ ಕುತೂಹಲಕಾರಿ ಘಟನೆ ಗುರುವಾರ ರಾತ್ರಿ ನಡೆದಿದೆ.

ಸಾಗರ-ಜೋಗಫಾಲ್ಸ್ ಮಾರ್ಗದಲ್ಲಿರುವ ಬಚ್ಚಗಾರು ಗ್ರಾಮದ ಶುಂಠಿ ಸತ್ಯನಾರಾಯಣಭಟ್ಟರ ಮನೆಯಲ್ಲಿ ಈ ಘಟನೆ ನಡೆದಿದೆ. ಮನೆಯೊಳಗೆ ನುಗ್ಗಿದ ಕಳ್ಳರು ಏನೂ ಸಿಕ್ಕಿಲ್ಲ. ಆದರೆ, ಸುವಾಸನೆ ಬೀರುವ ಅಪ್ಪೆ ಮಾವಿನ ಮಿಡಿಯ ಉಪ್ಪಿನಕಾಯಿ ಕಂಡಿದೆ. ಅದರ ರುಚಿಯನ್ನು ಸವಿದ ಕಳ್ಳ ಬಾಟಲಿಯನ್ನೇ ಕದ್ದೊಯ್ದಿದ್ದಾನೆ.
ಸಾಗರ ತಾಲೂಕಿನ ಬಚ್ಚಗಾರು ಗ್ರಾಮದಲ್ಲಿ ಸರಣಿ ಕಳ್ಳತನ ಮಾಡಲಾಗಿದೆ. ಮನೆಯ ಬೀಗ ಒಡೆದ ಹಣ ಬೆಳ್ಳಿ, ಎಲೆಕ್ಟ್ರಾನಿಕ್ ವಸ್ತುಗಳನ್ನು ಕಳವು ಮಾಡಲಾಗಿದೆ. ಆದರೆ, ಸತ್ಯನಾರಾಯಣಭಟ್ಟರ ಮನೆಯಲ್ಲಿ ಏನೂ ಸಿಗದಿದ್ದಕ್ಕೆ ಉಪ್ಪಿನ ಕಾಯಿಯನ್ನೇ ಕದ್ದೊಯ್ಯಲಾಗಿದೆ.
ಗುರುಮೂರ್ತಿ ಗಾಲಿಮನೆ, ಭಾರತಿ ಜಯರಾಂ ಎಂಬುವವರ ಮನೆಯಲ್ಲೂ ಕಳ್ಳತನ ಮಾಡಲಾಗಿದೆ. ಮನೆಗೆ ಬೀಗ ಹಾಕಿ ಬೇರೆಡೆಗೆ ಹೋದಾಗ ಕೃತ್ಯ ಎಸಗಲಾಗಿದೆ.
ಎರಡು ವಾರಗಳ ಹಿಂದಷ್ಟೇ ಶ್ರೀಪತಿ ಎಂಬಾತನ ಮನೆಗೆ ನುಗ್ಗಿದ ಕಳ್ಳರು ನಾಲ್ಕು ಸಾವಿರ ನಗದು ಎಗರಿಸಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200