SAGARA NEWS, 26 OCTOBER 2024 : ಭೂ ಹಕ್ಕಿಗಾಗಿ ಆಗ್ರಹಿಸಿ ಸಾಗರದಿಂದ ಪಾದಯಾತ್ರೆ ಮೂಲಕ ಲಿಂಗನಮಕ್ಕಿ ಜಲಾಶಯಕ್ಕೆ ಮುತ್ತಿಗೆ ಹಾಕಲು ಹೊರಟಿದ್ದ ರೈತರನ್ನು (Farmers) ಕಾರ್ಗಲ್ನಲ್ಲಿ ಪೊಲೀಸರು ಬಂಧಿಸಿದರು. ಇದಕ್ಕು ಮುನ್ನ ಸಚಿವ ಮಧು ಬಂಗಾರಪ್ಪ ರೈತರನ್ನು ಭೇಟಿಯಾಗಿ ಪಾದಯಾತ್ರೆ ಕೈ ಬಿಡುವಂತೆ ಮನವಿ ಮಾಡಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ಭೇಟಿ, ಮನವಿ
ಇನ್ನು, ಕಾರ್ಗಲ್ನ ಚೈನ್ ಗೇಟ್ ಬಳಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ರೈತರನ್ನು ಭೇಟಿಯಾಗಿ ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದರು. ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣ. ಅಗತ್ಯ ಬಿದ್ದರೆ ತಾವು ಕೂಡ ಪ್ರತಿಭಟನೆಯಲ್ಲಿ ಭಾಗವಹಿಸುವುದಾಗಿ ತಿಳಿಸಿದರು.
![]() |
ಸಮಸ್ಯೆ ಪರಿಹಾರಕ್ಕೆ ಟಾಸ್ಕ್ ಫೋರ್ಸ್ ರಚನೆ ಸಂಬಂಧ ಚರ್ಚಿಸಲು ಅ.29ರಂದು ರೈತ ಮುಖಂಡರು ಬೆಂಗಳೂರಿಗೆ ಬನ್ನಿ. ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಅರಣ್ಯ ಸಚಿವರನ್ನು ಭೇಟಿ ಮಾಡಿಸುತ್ತೇನೆ. ಮುಖ್ಯಮಂತ್ರಿಯನ್ನು ಭೇಟಿಯಾಗಿ ಟಾಸ್ಕ್ ಫೋರ್ಸ್ ರಚನೆಗೆ ಮನವಿ ಮಾಡೋಣ. ಈ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣ.
ಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವ
ಕಾರ್ಗಲ್ ಸಮೀಪ ರೈತರ ಬಂಧನ
ಸಚಿವ ಮಧು ಬಂಗಾರಪ್ಪ ಮನವಿಗೆ ಒಪ್ಪದ ರೈತರ ಮುಖಂಡರು ಲಿಂಗನಮಕ್ಕಿ ಜಲಾಶಯಕ್ಕೆ ಮುತ್ತಿಗೆ ಹಾಕುವುದಾಗಿ ತಿಳಿಸಿ ಪ್ರತಿಭಟನೆ ಮುಂದುವರೆಸಿದರು. ಕಾರ್ಗಲ್ನ ಚೌಡೇಶ್ವರಿ ದೇವಸ್ಥಾನದ ಬಳಿ ಪೊಲೀಸರು ರೈತರನ್ನು ತಡೆದು ಬಂಧಿಸಿದರು. ಬಳಿಕ ಸಾಗರದಲ್ಲಿ ಬಿಡುಗಡೆ ಮಾಡಿದರು.
ಮುಖ್ಯಮಂತ್ರಿ ಬಳಿ ಚರ್ಚೆಗೆ ಸಚಿವ ಮಧು ಬಂಗಾರಪ್ಪ ಆಹ್ವಾನಿಸಿದ್ದಾರೆ. ಆದರೆ ಮಲೆನಾಡ ರೈತರ ಸಮಸ್ಯೆ ಪರಿಹಾರ ಆಗುವವರೆಗೆ ಚಳವಳಿ ಮುಂದುವರೆಯಲಿದೆ. ಇವತ್ತಿನದ್ದು ಅಂತ್ಯವಲ್ಲ. ಚಳವಳಿಯ ಆರಂಭ.
ತೀ.ನಾ.ಶ್ರೀನಿವಾಸ್, ಮಲೆನಾಡು ಭೂ ರೈತರ ಹೋರಾಟ ವೇದಿಕೆ ಅಧ್ಯಕ್ಷ
ಎರಡು ದಿನ ನಿರಂತರ ಪಾದಯಾತ್ರೆ
ಬೇಡಿಕೆ ಈಡೇರಿಗೆ ಒತ್ತಾಯಿಸಿ ಸಾಗರದ ತಾಲೂಕು ಉಪ ವಿಭಾಗಾಧಿಕಾರಿ ಕಚೇರಿ ಮುಂಭಾಗ ರೈತರು ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಸುತ್ತಿದ್ದರು. ಅ.24ರಂದು ಲಿಂಗನಮಕ್ಕಿ ಚಲೋ ಹಮ್ಮಿಕೊಳ್ಳಲಾಗಿತ್ತು. ಸಾಗರದಿಂದ ತಾಳುಗುಪ್ಪದವರೆಗೆ ಮೊದಲ ಹಂತದ ಪಾದಯಾತ್ರೆ ನಡೆಸಲಾಗಿತ್ತು. ತಾಳಗುಪ್ಪದಿಂದ ಕಾರ್ಗಲ್, ಅಲ್ಲಿಂದ ಲಿಂಗನಮಕ್ಕಿ ಜಲಾಶಯಕ್ಕೆ ಮುತ್ತಿಗೆ ಹಾಕುವ ಯೋಜನೆ ಇತ್ತು.
ಇದನ್ನೂ ಓದಿ » ‘ಲಿಂಗನಮಕ್ಕಿ ಡ್ಯಾಮ್ಗೆ ಮುತ್ತಿಗೆ ಹಾಕ್ತೀವಿ, ವಿದ್ಯುತ್ ಉತ್ಪಾದನೆ ತಡೆಯುತ್ತೇವೆʼ
ಹಳ್ಳಿ ಹಳ್ಳಿಯಲ್ಲಿ ರೈತರ ಸ್ಪಂದನೆ
ಲಿಂಗನಮಕ್ಕಿ ಚಲೋ ಪಾದಯಾತ್ರೆಗೆ ಮಾರ್ಗದುದ್ದಕ್ಕು ಉತ್ತಮ ಪ್ರತಿಕ್ರಿಯೆ ವ್ಯಕ್ತಿವಾಗಿದೆ. ಪ್ರತಿಭಟನಾಕಾರರಿಗೆ ಅಲ್ಲಲ್ಲಿ ಸ್ಥಳೀಯರು ನೀರು, ಜೂಸ್, ಉಪಾಹಾರದ ವ್ಯವಸ್ಥೆ ಮಾಡಿದ್ದರು.
ಇದನ್ನೂ ಓದಿ » ಲಿಂಗನಮಕ್ಕಿ ಚಲೋ, ಸಾಗರದಿಂದ ಆರಂಭವಾದ ಪಾದಯಾತ್ರೆ
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದಿನೇಶ್ ಶಿರವಾಳ, ಶ್ರೀಕರ, ಮಲೆನಾಡು ಭೂ ರೈತರ ಹೋರಾಟ ವೇದಿಕೆ ಅಧ್ಯಕ್ಷ ತೀ.ನಾ.ಶ್ರೀನಿವಾಸ, ಮುಖಂಡರಾದ ಜಿ.ಟಿ. ಸತ್ಯನಾರಾಯಣ, ಮಲ್ಲಿಕಾರ್ಜುನ ಹಕ್ರೆ, ಪರಮೇಶ್ವರ ದೂಗೂರು ಸೇರಿ ಹಲವರು ಇದ್ದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200