ಸಾಗರ ಚತುಷ್ಪಥ ರಸ್ತೆ ಕಾಮಗಾರಿಗೆ ಗಡುವು ನಿಗದಿ, ಮಂಜೂರಾದ ಹಣವೆಷ್ಟು? ಎಲ್ಲಿಂದ ಶುರುವಾಗುತ್ತೆ ರಸ್ತೆ?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 5 ಏಪ್ರಿಲ್ 2022

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಮುಂದಿನ ಮಾರಿಕಾಂಬಾ ಜಾತ್ರೆ ವೇಳೆಗೆ ಚತುಷ್ಪಥ ರಸ್ತೆ ಲೋಕಾರ್ಪಣೆಗೊಳ್ಳಲಿದೆ ಎಂದು ಶಾಸಕ ಹರತಾಳು ಹಾಲಪ್ಪ ತಿಳಿಸಿದರು.

ಪಟ್ಟಣದ ಬಿ.ಹೆಚ್.ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಕೈಗೊಳ್ಳಲಾಗಿರುವ ರಾಷ್ಟ್ರೀಯ ಹೆದ್ದಾರಿ 206 ಆಗಲೀಕರಣಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳ ಜತೆ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರ ಕಾಳಜಿಯಿಂದ ಚತುಷ್ಪಥ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಕಾಮಗಾರಿಗೆ 77 ಕೋಟಿ ರೂ. ಮಂಜೂರಾಗಿದೆ. ಆರಂಭದಲ್ಲಿ ತ್ಯಾಗರ್ತಿ ಕ್ರಾಸ್ನಿಂದ ಅಗಲೀಕರಣ ಪ್ರಕ್ರಿಯೆ ಕೈಗೆತ್ತಿಕೊಳ್ಳುವ ಉದ್ದೇಶ ಹೊಂದಲಾಗಿತ್ತು. ಆದರೆ ನಗರ ಬೆಳೆಯುತ್ತಿರುವುದರಿಂದ ಬಳಸಗೊಂಡು ಗ್ರಾಮದಿಂದ ಅಗಲೀಕರಣ ನಡೆಸುವಂತೆ ಅಧಿಕಾರಿಗಳಿಗೆ ಕೋರಲಾಗಿತ್ತು. ಅದಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಿದರು.

ಹೆದ್ದಾರಿ ಪ್ರಾಧಿಕಾರದ ಕಾರ್ಯಪಾಲಕ ಅಭಿಯಂತ ಪರಮ ರೆಡ್ಡಿ ಮಾತನಾಡಿ, ಕಾಮಗಾರಿ ಆರಂಭಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. 2 ವರ್ಷ ಕಾಲಾವಧಿಗೆ ಗುತ್ತಿಗೆ ನೀಡಲಾಗಿದೆಯಾದರೂ ಒಂದೂವರೆ ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸುವ ನಿರೀಕ್ಷೆಯಿದೆ. ಭೂಸ್ವಾಧೀನ ಪ್ರಕ್ರಿಯೆ ಸೇರಿ ಕೆಲ ತೊಡಕುಗಳಿದ್ದು ಅದನ್ನು ಶಾಸಕ ಹರತಾಳು ಹಾಲಪ್ಪ ಅವರು ಬಗೆಹರಿಸುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಪ್ರಾಧಿಕಾರದ ಮುಖ್ಯ ಅಭಿಯಂತ ಹೆಚ್‌.ಸಿ.ರವೀಂದ್ರ, ನಿವೃತ್ತ ಅಧಿಕಾರಿ ಪೀರ್ ಪಾಷಾ ಇತರರಿದ್ದರು.

Shimoga Nanjappa Hospital

ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ

ಈ ಮೇಲ್ – shivamoggalive@gmail.com

WhatsApp Number – 7411700200

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment