ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 31 MARCH 2024
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
SAGARA : ಖ್ಯಾತ ರಂಗಭೂಮಿ ಕಲಾವಿದ, ಚಿತ್ರನಟ ಯೇಸು ಪ್ರಕಾಶ್ (58) ಶನಿವಾರ ಸಂಜೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಯೇಸು ಪ್ರಕಾಶ್ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರಿಗೆ ಪತ್ನಿ, ಪುತ್ರ, ಇಬ್ಬರು ಪುತ್ರಿಯರಿದ್ದಾರೆ.
ರಂಗ ನಮನದ ಮೂಲಕ ಶ್ರದ್ಧಾಂಜಲಿ
ಸಾಗರ ಸಮೀಪದ ಪುರಪ್ಪೆಮನೆಯ ಕಲ್ಲುಕೊಪ್ಪ ಗ್ರಾಮದವರಾದ ಯೇಸು ಪ್ರಕಾಶ್ ಚಲನಚಿತ್ರ ಮತ್ತು ರಂಗಭೂಮಿಯಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದರು. ನೀನಾಸಂ ಸಂಸ್ಥೆಯೊಂದಿಗೆ ಗುರುತಿಸಿಕೊಂಡಿದ್ದರು. ನಟನೆಯ ಜತೆಯಲ್ಲಿ ಸಾಮಾಜಿಕ ಹೋರಾಟಗಳಲ್ಲೂ ತಮ್ಮನ್ನು ಗುರುತಿಸಿಕೊಂಡಿದ್ದರು. ಭಾನುವಾರ ಬೆಳಗ್ಗೆ ಅವರ ಸ್ವಗ್ರಹದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದೆ. ಇದೇ ವೇಳೆ ರಂಗ ನಮನದ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಗುವುದು ಎಂದು ಆಪ್ತರು ತಿಳಿಸಿದ್ದಾರೆ.
ಇದನ್ನೂ ಓದಿ – ಸಾಲ ಹಿಂತಿರುಗಿಸಿದ ಸ್ನೇಹಿತ, ಹಣ ಎಣಿಸುವಾಗ ಕಾದಿತ್ತು ಆಘಾತ, ಗೆಳೆಯನ ವಿರುದ್ಧವೇ ಕೇಸ್, ಕಾರಣವೇನು?
ಯಾವೆಲ್ಲ ಸಿನಿಮಾದಲ್ಲಿ ಅಭಿನಯಿಸಿದ್ದರು?
ನಿರ್ದೇಶಕ ಎಸ್.ನಾರಾಯಣ್ ಮಗ ಪಂಕಜ್ ಅಭಿನಯದ ಮೊದಲ ಸಿನಿಮಾ ‘ವೀರು’ ಚಿತ್ರದಿಂದ ಯೇಸು ಪ್ರಕಾಶ್ ಅವರು ಕನ್ನಡ ಸಿನಿಮಾಗಳಲ್ಲಿ ಅಭಿನಯ ಆರಂಭಿಸಿದ್ದರು. ಪುನೀತ್ ರಾಜ್ಕುಮಾರ್ ಅಭಿನಯದ ‘ಯಾರೇ ಕೂಗಾಡಲಿ’, ದರ್ಶನ್ ನಟನೆಯ ‘ಸಾರಥಿ’ ಸಿನಿಮಾದಲ್ಲಿ ಕಾಡುಜನರ ನಾಯಕ, ‘ಯೋಧ’ ಸಿನಿಮಾದಲ್ಲಿ ರೌಡಿ ಜಯರಾಜ್, ‘ರಾಜಾಹುಲಿ’ ಸಿನಿಮಾದಲ್ಲಿ ಮೇಘನಾ ರಾಜ್ ತಂದೆಯ ಪಾತ್ರ ಸೇರಿದಂತೆ ಕನ್ನಡದ 35 ಕ್ಕೂ ಹೆಚ್ಚು ಚಿತ್ರಗಳಲ್ಲಿ ಯೇಸು ಪ್ರಕಾಶ್ ಅಭಿನಯಿಸಿದ್ದಾರೆ.
ಇದನ್ನೂ ಓದಿ – ಆಯನೂರು ಮಂಜುನಾಥ್ ವಿರುದ್ಧ ಡಾ. ಧನಂಜಯ ಸರ್ಜಿ ಗರಂ, ತಕ್ಕ ಪಾಠದ ಭವಿಷ್ಯ