ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ರೈಲ್ವೆ ಸುದ್ದಿ: ಶಿವಮೊಗ್ಗ – ಸಾಗರ ಮಧ್ಯೆ ಮಾರ್ಗದಲ್ಲಿ ನಾಲ್ಕು ಕಡೆ ರೈಲ್ವೆ ಲೆವೆಲ್ ಕ್ರಾಸಿಂಗ್ (Level Crossing) ಗೇಟ್‌ಗಳನ್ನು ತೆರೆದು ಪರಿಶೀಲನೆ ನಡೆಸಲಾಗುತ್ತದೆ. ಆದ್ದರಿಂದ ಆ ಮಾರ್ಗಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದ್ದು, ಪರ್ಯಾಯ ಮಾರ್ಗದಲ್ಲಿ ಸಂಚರಿಸಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದಾರೆ.
ಯಾವ್ಯಾವ ರಸ್ತೆಯಲ್ಲಿ ಯಾವಾಗ ರಿಪೇರಿ?
ಜೇಡಿಸರ ರಸ್ತೆ: ಸೆ.22ರ ಬೆಳಗ್ಗೆ 7 ಗಂಟೆಯಿಂದ ಸೆ.23ರ ರಾತ್ರಿ 11 ಗಂಟೆವರೆಗೆ ವಾಹನ ಸಂಚಾರ ನಿಷೇಧ. ಪರ್ಯಾಯ ಮಾರ್ಗ: ಆನಂದಪುರದಿಂದ ಜೇಡಿಸರ ಹಾಗೂ ಸಿದ್ದೇಶ್ವರ ಕಾಲೋನಿಯಿಂದ
ಅಣಲೆಕೊಪ್ಪ ರಸ್ತೆ: ಸೆ.24ರ ಬೆಳಗ್ಗೆ 7 ಗಂಟೆಯಿಂದ ಸೆ.25ರ ರಾತ್ರಿ 11 ಗಂಟೆವರೆಗೆ ವಾಹನ ಸಂಚಾರ ನಿಷೇಧ. ಪರ್ಯಾಯ ಮಾರ್ಗ: ಸಾಗರದ ಸೊರಬ ರಸ್ತೆಯ (ಅಣಲೆಕೊಪ್ಪದಿಂದ ಸಾಗರ ಸಿಟಿ ಹಾಗೂ ಸಾಗರ ಸಿಟಿಯಿಂದ ಅಣಲೆಕೊಪ್ಪ).
ಇದನ್ನೂ ಓದಿ » ಮೈಸೂರು – ಶಿವಮೊಗ್ಗ, ತಾಳಗುಪ್ಪ – ಮೈಸೂರು ಎಕ್ಸ್‌ಪ್ರೆಸ್ ರೈಲುಗಳು ಮಾರ್ಗ ಮಧ್ಯೆ ನಿಯಂತ್ರಣ, ಯಾವಾಗ?
ಹೊಸೂರು ರಸ್ತೆ: ಸೆ.26ರ ಬೆಳಗ್ಗೆ 7 ಗಂಟೆಯಿಂದ ಸೆ.26ರ ರಾತ್ರಿ 11 ಗಂಟೆವರೆಗೆ ವಾಹನ ಸಂಚಾರ ನಿಷೇಧ. ಪರ್ಯಾಯ ಮಾರ್ಗ: ಆನಂದಪುರದಿಂದ ಹೊಸೂರು, ಯಡೇಹಳ್ಳಿಯಿಂದ ಆಡೂರು ಕೋಣನತಲೆ ಹೊಸೂರು ಆನಂದಪುರದಿಂದ ಸಾಗರ ಮಾರ್ಗ. ಯಡೇಹಳ್ಳಿಯಿಂದ ಬಟ್ಟೆಮಲ್ಲಪ್ಪ ಸಾಗರ ಮಾರ್ಗ.

ತ್ಯಾಗರ್ತಿ ರಸ್ತೆ: ಸೆ.28ರ ಬೆಳಗ್ಗೆ 7 ಗಂಟೆಯಿಂದ ಸೆ.29ರ ರಾತ್ರಿ 11 ಗಂಟೆವರೆಗೆ ವಾಹನ ಸಂಚಾರ ನಿಷೇಧ. ಪರ್ಯಾಯ ಮಾರ್ಗ: ಸಾಗರದಿಂದ ತ್ಯಾಗರ್ತಿ ಮಾರ್ಗ. ಸಾಗರ – ಕಲಸೆ – ಬೊಮ್ಮಟ್ಟೆ ತ್ಯಾಗರ್ತಿ. ಉಳ್ಳೂರು – ಕಾಸ್ಪಾಡಿ – ಅಡ್ಡೇರಿ – ಬಿಳಗುಂಡಿ – ನಿಚಡಿ – ತ್ಯಾಗರ್ತಿ, ಕಲಸೆ – ಬೊಮ್ಮಟ್ಟಿ ತ್ಯಾಗರ್ತಿ. ಬಳಸಗೋಡು – ಮಂಚಾಲೆ – ಬೊಮ್ಮಟ್ಟೆ – ತ್ಯಾಗರ್ತಿ.

Shivamogga, Sagara, railway, road closure, traffic update, travel advisory, maintenance, local news, Karnataka, level crossing
LATEST NEWS
- ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

- ಬ್ಯಾಂಕ್ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

- ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ ₹20,000 ದಿಂದ ₹50,000 ದವರೆಗೆ ಸಂಬಳ

- ತಂದೆ, ಮಗನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್, ಯಾಕೆ?

- ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್ 2026 – ಅಡಿಕೆ ಧಾರಣೆ

About The Editor
ನಿತಿನ್ ಆರ್.ಕೈದೊಟ್ಲು















