ಕಾಲೇಜು ಸಮೀಪ ಅಂಗಡಿಗೆ ದಿಢೀರ್‌ ಭೇಟಿ ನೀಡಿದ ಶಾಸಕ, ಖಡಕ್‌ ವಾರ್ನಿಂಗ್‌, ಕಾರಣವೇನು?

ನಿಮ್ಮ ಊರಿನ ಸುದ್ದಿಗಳನ್ನು ನಮಗೆ ವಾಟ್ಸಪ್ ಮಾಡಿ 7411700200

SHIVAMOGGA LIVE NEWS | 20 MAY 2024

SAGARA : ಶಾಲೆ, ಕಾಲೇಜಿನಿಂದ 100 ಮೀಟರ್‌ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನ ಮಾರಾಟ ನಿಷಧವಿದೆ. ಹೀಗಿದ್ದೂ ಗುಟ್ಕಾ, ಸಿಗರೇಟ್‌ ಮಾರಾಟ ಮಾಡುತ್ತಿದ್ದ ಅಂಗಡಿಯೊಂದಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿ, ಎಚ್ಚರಿಕೆ ನೀಡಿದರು.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಜೋರು ಮಳೆಗೆ ರಸ್ತೆಗಳು ಜಲಾವೃತ, ವಾಹನ ಸವಾರರ ಪರದಾಟ

ಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮುಂಭಾಗ ಅಂಗಡಿಯೊಂದರಲ್ಲಿ ಗುಟ್ಕಾ, ಪಾನ್‌, ಸಿಗರೇಟ್‌ ಮಾರಾಟ ಮಾಡಲಾಗುತ್ತಿತ್ತು. ಪರಿಶೀಲನೆ ನಡೆಸಿದ ಶಾಸಕ ಬೇಳೂರು ಗೋಪಾಲಕೃಷ್ಣ, ಕಾಲೇಜು ಸಮೀಪ ಇವೆಲ್ಲ ಮಾರಾಟ ಮಾಡುವಂತ್ತಿಲ್ಲ. ಮಕ್ಕಳ ಶೈಕ್ಷಿಣಿಕ ಬದುಕಿನ ಮೇಲೆ ಪರಿಣಾಮ ಉಂಟು ಮಾಡಲಿದೆ. ಇದು ಹೀಗೆ ಮುಂದುವರೆದರೆ ಅಂಗಡಿ ಬಂದ್‌ ಮಾಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಹೆಚ್ಚಿನ Shimoga News, Shivamogga News ಮತ್ತು SAGARA ಸುದ್ದಿಗಳಿಗಾಗಿ ಶಿವಮೊಗ್ಗ ಲೈವ್ ನೋಡಿ.

© ಶಿವಮೊಗ್ಗ ಲೈವ್‌ : ಮೇ 20, 2024

Leave a Comment