SHIVAMOGGA LIVE NEWS | 3 FEBRUARY 2023
SHIMOGA : ಫೆ.7 ರಿಂದ ಸಾಗರದ ಪ್ರಸಿದ್ಧ ಮಾರಿಕಾಂಬ ದೇವಿ ಜಾತ್ರೆ ಮಹೋತ್ಸವ (Marikamba Jathre) ನಡೆಯಲಿದೆ. ಈ ಹಿನ್ನೆಲೆ ಪಟ್ಟಣದ ಹಲವು ಮಾರ್ಗಗಳಲ್ಲಿ ವಾಹನ ಸಂಚಾರ, ನಿಲುಗಡೆಯನ್ನು ತಾತ್ಕಾಲಿಕವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಆದೇಶ ಹೊರಡಿಸಿದ್ದಾರೆ.
ಫೆ.7ರಿಂದ 15ರವರೆಗೆ ಸಾಗರ ಮಾರಿಕಾಂಬ ದೇವಿ ಜಾತ್ರೆ ಮಹೋತ್ಸವ (Marikamba Jathre) ನಡೆಯಲಿದೆ. ಪ್ರತಿದಿನ 50 ಸಾವಿರಕ್ಕೂ ಹೆಚ್ಚು ಭಕ್ತರು ಜಾತ್ರೆಗೆ ಆಗಮಿಸಲಿದ್ದಾರೆ. ಈ ವೇಳೆ ಭಕ್ತರು ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಕೆಲವು ರಸ್ತೆಗಳಲ್ಲಿ ವಾಹನ ಸಂಚಾರ ಮತ್ತು ನಿಲುಗಡೆ ನಿಷೇಧಿಸಲಾಗಿದೆ.
ಯಾವ್ಯಾವ ರಸ್ತೆಯಲ್ಲಿ ನಿಷೇಧ?
ಸಾಗರ ಪೇಟೆ ಪೊಲೀಸ್ ಠಾಣೆ ಎದುರಿನ ಜೆ.ಸಿ.ವೃತ್ತದಿಂದ ಜೆ.ಸಿ.ರಸ್ತೆ, ಸಾಗರ ಸರ್ಕಲ್ ಮಾರ್ಗವಾಗಿ ಐತಪ್ಪ ಸರ್ಕಲ್ ವರೆಗೆ ಎರಡು ಕಡೆ ಹೋಗಿ ಬರುವ ವಾಹನಗಳ ನಿಷೇಧ.
ಅಂಬೇಡ್ಕರ್ ವೃತ್ತ (ಲಿಂಬೂ ಸರ್ಕಲ್) ನಿಂದ ಸಾಗರ ಸರ್ಕಲ್ ವರೆಗೆ ವಾಹನ ಸಂಚಾರ ನಿಷೇಧ
ಇದನ್ನೂ ಓದಿ – ಟ್ರಾಫಿಕ್ ದಂಡ 50% DISCOUNT, ಶಿವಮೊಗ್ಗದಲ್ಲಿ ಎಲ್ಲೆಲ್ಲಿ ದಂಡ ಕಟ್ಟಬಹುದು? ಎಷ್ಟು ದಿನ ಟೈಮ್ ಇದೆ?
ಸತ್ಯನಾರಾಯಣ ಸ್ವಾಮಿ ದೇವಸ್ಥಾನ ಸರ್ಕಲ್ ನಿಂದ ಸಾಗರ ಸರ್ಕಲ್ ವರೆಗೆ ವಾಹನ ಸಂಚಾರ ನಿಷೇಧ.
ದುರ್ಗಾಂಬ ವೃತ್ತ (ಸೊರಬ ಸರ್ಕಲ್) ಮೂಲಕ ಸೊರಬ ರಸ್ತೆ ಮಾರ್ಕೆಟ್ ರಸ್ತೆ ಮೂಲಕ ಎಸ್.ಎನ್ ವೃತ್ತದವರೆಗೆ ಎಲ್ಲಾ ಮಾದರಿ ವಾಹನಗಳ ನಿಲುಗಡೆ ನಿಷೇಧ.
ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣ, 2 ಏರ್ ಲೈನ್ಸ್ ಜೊತೆ ಮೀಟಿಂಗ್, ಜಿಲ್ಲೆಯಲ್ಲಿ ಟೂರಿಸಂ ರೋಡ್ ಶೋಗೆ ಪ್ಲಾನ್
ದುರ್ಗಾಂಬ ವೃತ್ತ (ಸೊರಬ ಸರ್ಕಲ್) ಮೂಲಕ ಸೊರಬ ರಸ್ತೆ ಮಾರ್ಕೆಟ್ ರಸ್ತೆ ಮೂಲಕ ಎಸ್.ಎನ್.ವೃತ್ತದವರೆಗೆ ಬೆಳಗ್ಗೆ 10 ಗಂಟೆಯಿಂದ ರಾತ್ರಿ 12 ಗಂಟೆವರೆಗೆ ಎಲ್ಲಾ ಮಾದರಿ ಸರಕು ಸಾಗಣೆ ವಾಹನ ಸಂಚಾರ ನಿಷೇಧ.
ಇದನ್ನೂ ಓದಿ – 2 ತಿಂಗಳು ಬಾಳೆಬರೆ ಘಾಟ್ ಬಂದ್, ತೀರ್ಥಹಳ್ಳಿ, ಸಾಗರ, ಹೊಸನಗರದಿಂದ ಕುಂದಾಪುರಕ್ಕೆ 3 ಬದಲಿ ಮಾರ್ಗ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200