SHIVAMOGGA LIVE | 17 JULY 2023
SAGARA : ಟ್ರಾನ್ಸ್‌ಫಾರ್ಮರ್ ಆಫ್ ಮಾಡಿ ರಾತ್ರೋರಾತ್ರಿ ವಿದ್ಯುತ್ ತಂತಿ (Power Cable) ಕಳ್ಳತನ ಮಾಡಲಾಗಿದೆ. ಸುಮಾರು ಒಂದು ಸಾವಿರ ಮೀಟರ್ ವಿದ್ಯುತ್ ತಂತಿ ಕಳುವಾಗಿದೆ ಎಂದು ಹೇಳಲಾಗುತ್ತಿದೆ.
ಏನಿದು ಪ್ರಕರಣ?
ಸಾಗರ ತಾಲೂಕು ಎಸ್.ಎಸ್.ಭೋಗ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಾಠಿ ಮತ್ತು ಹೊಸಗದ್ದೆ ಸೇರಿದಂತೆ ಇತರೆ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಇಕ್ಕಿಬೀಳು ಗ್ರಾಮದಲ್ಲಿ ಟ್ರಾನ್ಸ್‌ಫಾರ್ಮರ್ ಅಳವಡಿಸಲಾಗಿದೆ. ಕಳ್ಳರು ಇಕ್ಕಿಬೀಳು ಟ್ರಾನ್ಸ್‌ಫಾರ್ಮರ್‌ನಲ್ಲಿ ವಿದ್ಯುತ್ ಹರಿವು ನಿಲ್ಲಿಸಿ, ಚಾರ್ಜರ್ ಆಫ್ ಮಾಡಿ ಕಂಬಗಳಲ್ಲಿ ಇದ್ದ ವಿದ್ಯುತ್ ತಂತಿಯ (Power Cable) ಕಳ್ಳತನ ಮಾಡಿದ್ದಾರೆ.
ಸಾಕಷ್ಟು ಮನವಿ ಮಾಡಿ ವಿದ್ಯುತ್ ಸಂಪರ್ಕ
ಎಸ್.ಎಸ್.ಭೋಗ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಾಠಿ ಮತ್ತು ಹೊಸಗದ್ದೆ ಶರಾವತಿ ಅಭಯಾರಣ್ಯ ವ್ಯಾಪ್ತಿಗೆ ಒಳಪಡುತ್ತವೆ. ಆದ್ದರಿಂದ ಇಲ್ಲಿಗೆ ಸೌಲಭ್ಯಗಳು ಸಿಗುವುದು ಕಷ್ಟ.
ಇದನ್ನೂ ಓದಿ – ಆಗುಂಬೆ ಘಾಟಿಯಲ್ಲಿ ಕಂದಕಕ್ಕೆ ಬಿದ್ದ ವ್ಯಕ್ತಿ, ಪ್ರಾಣದ ಹಂಗು ತೊರೆದು ರಕ್ಷಿಸಿದ ಯುವಕರು
ಹಲವು ಬಾರಿ ಮನವಿ ಮಾಡಿ ಗ್ರಾಮಸ್ಥರು ವಿದ್ಯುತ್ ಸಂಪರ್ಕ ಪಡೆದಿದ್ದರು. ಈಗ ವಿದ್ಯುತ್ ತಂತಿ ಕಳ್ಳರ ಪಾಲಾಗಿದ್ದು, ಗ್ರಾಮಸ್ಥರು ಪುನಃ ಸಂಕಷ್ಟಕ್ಕೀಡಾಗಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200