SHIVAMOGGA LIVE NEWS | 19 DECEMBER 2023
SHIMOGA : ಕುಂಸಿ – ಆನಂದಪುರ ಸ್ಟೇಷನ್ ಮಧ್ಯೆ ಬರುವ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್‌ನಲ್ಲಿ ತಾಂತ್ರಿಕ ಪರಿಶೀಲನೆ ನಡೆಸಲಾಗುತ್ತಿದೆ. ಈ ಹಿನ್ನೆಲೆ ಡಿ.25 ರಿಂದ 26 ರವರೆಗೆ ರೈಲ್ವೆ ಗೇಟ್ ಮುಚ್ಚಲಾಗುತ್ತೆ. ಹಾಗಾಗಿ ವಾಹನಗಳಿಗೆ ಪಯಾರ್ಯ ಮಾರ್ಗ ಕಲ್ಪಿಸಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್. ಆದೇಶಿಸಿದ್ದಾರೆ.
ಯಾವ್ಯಾವ ಮಾರ್ಗದಲ್ಲಿ ವಾಹನ ಸಂಚಾರ?
ರಿಪ್ಪನ್‍ಪೇಟೆಯಿಂದ ಆಯನೂರು ಮತ್ತು ಆಯನೂರಿನಿಂದ ರಿಪ್ಪನ್‍ಪೇಟೆಗೆ ಸಂಚರಿಸುವ ಲಘು ವಾಹನಗಳು ರೈಲ್ವೆ ಲೆವೆಲ್ ಕ್ರಾಸ್ ನಂ.79ರ ಮೂಲಕ ಆಯನೂರು, ಕುಂಸಿ, ಚೋರಡಿ, ಗುಂಡೂರು ಕ್ರಾಸ್, ಶೆಟ್ಟಿಕೆರೆ, ಸೂಡೂರು, ರಿಪ್ಪನ್‍ಪೇಟೆ ತಲುಪಬಹುದು.
ರಿಪ್ಪನ್‍ಪೇಟೆಯಿಂದ ಶಿವಮೊಗ್ಗಕ್ಕೆ ಬರುವ ವಾಹನಗಳು ರಿಪ್ಪನ್‍ಪೇಟೆ, ಸೂಡೂರು, ಶೆಟ್ಟಿಕೆರೆ, ಚೋರಡಿ, ಕುಂಸಿ, ಆಯನೂರು, ಶಿವಮೊಗ್ಗ ಮಾರ್ಗವಾಗಿ ಹಾಗೂ ಭಾರಿ ವಾಹನಗಳು ಅಯನೂರು, ಕುಂಸಿ, ಚೋರಡಿ, ಆನಂದಪುರ, ರಿಪ್ಪನ್‍ಪೇಟೆ ಮುಖಾಂತರ ಪರ್ಯಾಯ ಮಾರ್ಗದಲ್ಲಿ ವಾಹನಗಳು ಸಂಚರಿಸುವಂತೆ ಜಿಲ್ಲಾಧಿಕಾರಿಗಳು ಆದೇಶದಲ್ಲಿ ಸೂಚಿಸಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗ ರೈಲ್ವೆ ನಿಲ್ದಾಣ ಎದುರು 100 ಅಡಿ ರಸ್ತೆಯಲ್ಲಿ ಹಂಪ್‌ಗಳಿಂದಲೆ ಅಪಘಾತ, ಹೇಗದು?
- ಶಿವಮೊಗ್ಗದ ಫ್ರೀಡಂ ಪಾರ್ಕ್ನಲ್ಲಿ 3 ದಿನ ಫಲಪುಷ್ಪ ಪ್ರದರ್ಶನ, ಈ ವರ್ಷದ ವಿಶೇಷತೆ ಏನು?
- 2022ರಲ್ಲಿ ಅಪ್ಲೋಡ್ ಆಗಿದ್ದ ವಿಡಿಯೋ, ಶಿವಮೊಗ್ಗದ ಯುವಕನಿಗೆ ಈಗ ಶುರು ಸಂಕಷ್ಟ
- ಅಡಿಕೆ ಧಾರಣೆ | 22 ಜನವರಿ 2025 | ಇವತ್ತು ಯಾವ್ಯಾವ ಅಡಿಕೆ ಎಷ್ಟಿದೆ ರೇಟ್?
- ಸೈನ್ಸ್ ಮೈದಾನ, ಸಂಜೆ ಪಾರ್ಕಿಂಗ್ ಸ್ಥಳಕ್ಕೆ ಬಂದ ವ್ಯಕ್ತಿಗೆ ಕಾದಿತ್ತು ಆಘಾತ
- ಇನ್ಮುಂದೆ ಕಾಗೋಡು ತಿಮ್ಮಪ್ಪ, ಡಾಕ್ಟರ್ ಕಾಗೋಡು ತಿಮ್ಮಪ್ಪ
- ಕುವೆಂಪು ವಿವಿ, 84 ವಿದ್ಯಾರ್ಥಿಗಳಿಗೆ ಚಿನ್ನದ ಪದಕ, ಹೇಗಿತ್ತು 34ನೇ ಘಟಿಕೋತ್ಸವ?