ಧರೆ ಕುಸಿದು ತೋಟ ಜಲಾವೃತ, ಸಾಗರದಲ್ಲಿ ಸಹಾಯವಾಣಿ ಆರಂಭ, ತಾಲೂಕಿನಲ್ಲಿ ಎಷ್ಟೆಲ್ಲ ಹಾನಿಯಾಗಿದೆ?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 19 JULY 2024

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

SAGARA NEWS : ಈ ಬಾರಿ ಸಾಗರ ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿದೆ (Rain). ಇದರಿಂದ ವಿವಿಧೆಡೆ ಧರೆ ಕುಸಿತ, ಆಸ್ತಿಪಾಸ್ತಿ ಹಾನಿಯಾಗಿದೆ. ಜುಲೈ ತಿಂಗಳಲ್ಲಿ ವಾಡಿಕೆಗಿಂತಲೂ ಹೆಚ್ಚು ಮಳೆಯಾಗಿದೆ.

ಸಾಗರ ತಾಲೂಕಿನಲ್ಲಿ ಜುಲೈ ತಿಂಗಳ ವಾಡಿಕೆ ಮಳೆ 847.70 ಮಿ.ಮೀ. ಆದರೆ ಈವರೆಗೂ ತಾಲೂಕಿನಲ್ಲಿ 1071.40 ಮಿ.ಮೀ ಮಳೆಯಾಗಿದೆ. ಮತ್ತಷ್ಟು ಮಳೆಯಾಗುವ ಸಾಧ್ಯತೆ ಇದ್ದು, ಹಾನಿಯ ಭೀತಿ ಎದುರಾಗಿದೆ.

#EBEDEF

 ಧರೆ ಕುಸಿತ, ತೋಟಗಳು ಜಲಾವೃತ 

ಕರೂರು ಹೋಬಳಿಯ ಕುದರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಚಗೋಡು ಗ್ರಾಮದಲ್ಲಿ ಗುಡ್ಡ ಜರಿದು ಕಲ್ಲು, ಮಣ್ಣು ಸಮೀಪದ ಹಳ್ಳಕ್ಕೆ ಬಿದ್ದಿದೆ. ಹಳ್ಳದ ನೀರು ಅಕ್ಕಪಕ್ಕದ ತೋಟಗಳಿಗೆ ನುಗ್ಗಿದ್ದು, ರೈತರಲ್ಲಿ ಆಂತಕ ಮೂಡಿಸಿದೆ. ಸುಮಾರು ಆರೇಳು ಎಕರೆ ತೋಟಕ್ಕೆ ಹಳ್ಳದ ನೀರು ನುಗ್ಗಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Kudaruru

#EBEDEF

 ಗಾಳಿ, ಮಳೆಗೆ ಕುಸಿದ ಕೊಟ್ಟಿಗೆ 

ಕರೂರು ಹೋಬಳಿಯ ಹೊಸಮನೆಯ ಬೀರಾನಾಯ್ಕ ಅವರ ಮನೆ ಹಿಂಭಾಗದ ಕೊಟ್ಟಿಗೆ ಕುಸಿದಿದೆ. 9 ಜಾನುವಾರುಗಳನ್ನು ರಕ್ಷಿಸಲಾಗಿದೆ. 3 ಜಾನುವಾರುಗಳು ಗಂಭೀರ ಗಾಯಗೊಂಡಿವೆ. ಹುಲ್ಲು, ಹೆಂಚ್ಚು, ನಾಟಕ್ಕೆ ಹಾನಿಯಾಗಿದೆ. ಸುಮಾರು 1 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಸಲಾಗಿದೆ.

karuru

#EBEDEF

 530 ಹೆಕ್ಟೇರ್‌ ಗದ್ದೆಗೆ ಹಾನಿ 

ಸಾಗರ ತಾಲೂಕಿನಲ್ಲಿ ಭಾರಿ ಮಳೆಯಿಂದಾಗಿ 530 ಹೆಕ್ಟೇರ್‌ ಭತ್ತದ ಗದ್ದೆ, 4.4 ಹೆಕ್ಟೇರ್‌ ಅಡಿಕೆ ತೋಟ ಜಲಾವೃತವಾಗಿದೆ. ತಾಳಗುಪ್ಪ ಹೋಬಳಿಯ ಬೀಸನಗದ್ದೆ ಭಾಗದಲ್ಲಿ 150 ಹೆಕ್ಟೇರ್‌ ಪ್ರದೇಶ ಜಲಾವೃತವಾಗಿದೆ. ಜುಲೈ ತಿಂಗಳಲ್ಲಿ ಈವರೆಗೆ 20 ಮನೆಗಳು,     7 ಕೊಟ್ಟಿಗೆಗಳು ಹಾನಿಯಾಗಿವೆ. 1 ಜಾನುವಾರು ಮೃತಪಟ್ಟಿದೆ.

areca Farm

#EBEDEF

 ಸಹಾಯವಾಣಿ ಸ್ಥಾಪಿಸಿದ ಆಡಳಿತ 

ಮಳೆ ಹಾನಿಗೆ ಸಂಬಂಧಿಸಿದಂತೆ ಸಾಗರ ತಾಲೂಕು ಆಡಳಿತ ಸಹಯವಾಣಿ ಸ್ಥಾಪಿಸಿದೆ. ತುರ್ತು ನೆರವು ಅಗತ್ಯವಿದ್ದವರು ಈ ನಂಬರ್‌ಗೆ ಕರೆ ಮಾಡಬಹುದಾಗಿದೆ. ಸಹಾಯವಾಣಿ ಸಂಖ್ಯೆ 08183 226074 ಸಂಪರ್ಕಿಸಬಹುದಾಗಿದೆ.

ಇದನ್ನೂ ಓದಿ ⇓

ಶಿವಮೊಗ್ಗ ಜಿಲ್ಲೆಗೆ ಮತ್ತೆ ರೆಡ್‌ ಅಲರ್ಟ್‌, ಕಳೆದ 24 ಗಂಟೆಯಲ್ಲಿ ಎಲ್ಲೆಲ್ಲಿ ಎಷ್ಟಾಗಿದೆ ಮಳೆ?

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment