ಸಾಗರದಲ್ಲಿ ಇಂದಿನಿಂದ ‘ರಜತ ಸಾಗರೋತ್ಸವʼ, ಏನೇನೆಲ್ಲ ಕಾರ್ಯಕ್ರಮ ಇರಲಿದೆ?

 ಶಿವಮೊಗ್ಗ  LIVE 

ಸಾಗರ: ಸಹೃದಯ ಬಳಗ, ತಾಲೂಕು ಇತಿಹಾಸ ವೇದಿಕೆಯ ಆಶ್ರಯದಲ್ಲಿ ಜನವರಿ 3 ಮತ್ತು 4ರಂದು ಗಾಂಧಿ ಮೈದಾನದಲ್ಲಿ ರಜತ ಸಾಗರೋತ್ಸವ (Sagarotsava) 2026 ಕಾರ್ಯಕ್ರಮ ನಡೆಯಲಿದೆ.

ಜನವರಿ 3ರಂದು ಸಂಜೆ 5ಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಆನಂದಪುರದ ಮುರುಘಾ ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಕೆಳದಿ ರಾಜಗುರು ಹಿರೇಮಠದ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಸೇರಿ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ವಿವಿಧ ಕ್ಷೇತ್ರಗಳ ಸಾಧಕರಿಗೆ ಸಹೃದಯ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ.

ಶಾರದಾಂಬಾ ಕಲಾ ಕೇಂದ್ರದಿಂದ ಭರತನಾಟ್ಯ, ದೈವಜ್ಞ ಚಿಣ್ಣರಿಂದ ಚಂಡೆ ವಾದನ, ಸಿಯಾನ್ ಪಂಚಪ್ಪ ಮತ್ತು ತಂಡದವರಿಂದ ಕರಾಟೆ ಪ್ರದರ್ಶನ, ಮನು ಹಂದಾಡಿ ಅವರಿಂದ ಹಾಸ್ಯ ಕಾರ್ಯಕ್ರಮ ನಡೆಯಲಿದೆ.

ಇದನ್ನೂ ಓದಿ » ‌ATMನಿಂದ ಹಿಂತಿರುಗಿ ಬ್ಯಾಂಕಿನಲ್ಲಿ ಅಕೌಂಟ್‌ ಚೆಕ್‌ ಮಾಡಿದ ಮಹಿಳೆಗೆ ಕಾದಿತ್ತು ಶಾಕ್, ಆಗಿದ್ದೇನು?

ಜನವರಿ 4ರಂದು ಸಂಜೆ 5ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಸಂಸದ ಬಿ.ವೈ.ರಾಘವೇಂದ್ರ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಹಾಲಪ್ಪ ಹರತಾಳು, ಡಾ.ರಾಜನಂದಿನಿ ಕಾಗೋಡು ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಮಾಲತೇಶ್ ಜೋಗಿ ತಂಡದಿಂದ ಗೀಗೀ ಪದ, ವಿದುಷಿ ಮೇಘನಾ ರಾವ್, ಆದ್ಯ ರಿಪ್ಪನ್‌ಪೇಟೆ ಅವರಿಂದ ಭರತನಾಟ್ಯ, ಪರಿಣಿತಿ ಕಲಾ ಕೇಂದ್ರದಿಂದ ಜಾನಪದ ನೃತ್ಯ, ಕರ್ನಾಟಕ ಜಾನಪದ ಪರಿಷತ್ತಿನಿಂದ ಗಾಯನ, ಮಿಮಿಕ್ರಿ ದಯಾನಂದ್ ಅವರಿಂದ ನಗೆಹಬ್ಬ ಕಾರ್ಯಕ್ರಮ ಆಯೋಜಿಸಲಾಗಿದೆ. ಆಹಾರ ಮೇಳವನ್ನು ಸಂಘಟಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment