SHIVAMOGGA LIVE NEWS | 11 NOVEMBER 2023
SAGARA : ಹೊಸನಗರ ತಾಲೂಕು ನಗರ ಹೋಬಳಿ ಬಿದನೂರಿನ ಕೊಪ್ಪಲು ಮಠದಲ್ಲಿರುವ ಕೆಳದಿ ಅರಸರ (Keladi kings) ಐತಿಹಾಸಿಕ ಸ್ಮಾರಕಗಳನ್ನು ನಾಶಪಡಿಸಿ ಅಲ್ಲಿಯ ಜಾಗವನ್ನು ಒತ್ತುವರಿ ಮಾಡಲಾಗಿದೆ. ತಕ್ಷಣ ಒತ್ತುವರಿ ತೆರವುಗೊಳಿಸುವುದಲ್ಲದೆ ಸ್ಮಾರಕಗಳನ್ನು ಸಂರಕ್ಷಿಸಿ, ಜೀರ್ಣೋದ್ಧಾರ ಮಾಡಬೇಕು ಎಂದು ಸಾಗರ ತಾಲೂಕು ಅಖಿಲ ಭಾರತ ವೀರಶೈವ ಮಹಾಸಭಾ ಆಗ್ರಹಿಸಿದೆ.
ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಮಹಾಸಭಾ ಪದಾಧಿಕಾರಿಗಳು, ಕೊಪ್ಪಲು ಮಠದಲ್ಲಿರುವ ಸ್ಮಾರಕಗಳು ಶಿಥಿಲಗೊಂಡಿದೆ. ವಿಶೇಷವಾಗಿ ಶಿವಪ್ಪನಾಯಕನ ಸಮಾಧಿ ಕೂಡ ಇಲ್ಲಿದ್ದು ಪೂರ್ಣ ಪ್ರಮಾಣದಲ್ಲಿ ಸಂಶೋಧನೆಗೆ ಒಳಪಡಿಸಬೇಕು. ಆದರೆ ಸ್ಮಾರಕಗಳ ಅಂಚಿನವರೆಗೂ ಖಾಸಗಿ ವ್ಯಕ್ತಿಗಳು ಗದ್ದೆ, ತೋಟ ಮೊದಲಾದ ಕೃಷಿ ಚಟುವಟಿಕೆಗೆ ಮಾಡುತ್ತಿರುವುದರಿಂದ ಒತ್ತುವರಿಯಿಂದ ಐತಿಹಾಸಿಕ ಸ್ಮಾರಕಗಳ ಮಹತ್ವ ಕಳೆದು ಹೋಗುತ್ತಿದೆ. ಅಲ್ಲಿಗೆ ಹೋಗುವುದಕ್ಕೆ ರಸ್ತೆಯೂ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಪುರಾತತ್ವ ಇಲಾಖೆಗೆ ಕೋಟೆಯೂ ಸೇರಿದಂತೆ ಈ ಎಲ್ಲ ಐತಿಹಾಸಿಕ ಸ್ಮಾರಕಗಳ ಸಂರಕ್ಷಿಸುವ ಜವಾಬ್ದಾರಿ ಇದೆ. ಆದರೂ ಒತ್ತುವರಿ ತೆರವುಗೊಳಿಸಿಲ್ಲ. ಅಭಿವೃದ್ಧಿಗೆ ಮುಂದಾಗಿಲ್ಲ. ಸ್ಮಾರಕದ ಸುತ್ತಮುತ್ತಲು ನಿಷೇಧಿತ ಪ್ರದೇಶ ಎನ್ನುವ ನಿಯಮವಿದೆ. ಆದರೂ ಗಾಳಿಗೆ ತೂರಲಾಗಿದೆ. ಹಾಗಾಗಿ, ತಕ್ಷಣ ಇದನ್ನು ಗಮನಿಸಿ ಅಧಿಕಾರಿಗಳು ಒತ್ತುವರಿ ತೆರವುಗೊಳಿಸಿ, ಕೆಳದಿ ಅರಸರ ಸ್ಮಾರಕ ಸಂರಕ್ಷಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ- ಶಿವಮೊಗ್ಗ ಜಿಲ್ಲೆಯ ಪ್ರಗತಿ ಪರಿಶೀಲನೆ, ಸಭೆಯಲ್ಲಿ ಚರ್ಚೆಯಾದ 7 ಪ್ರಮುಖಾಂಶ ಇಲ್ಲಿದೆ
ಈ ವೇಳೆ ಬಂದಗದ್ದೆ ಕೆಳದಿ ಸಂಸ್ಥಾನ ರಾಜಗುರು ಹಿರೇಮಠದ ಡಾ. ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಹಾಸಭಾದ ಕೆ.ವಿ. ಪ್ರವೀಣ್ ಮಾತನಾಡಿದರು. ಮಹಾಸಭಾ ಅಧ್ಯಕ್ಷ ಆರ್. ಶೇಖರಪ್ಪಗೌಡ, ಪ್ರಧಾನ ಕಾಯದರ್ಶಿ ವೀರೇಶ್ ಸೆಡ್ಡಿಕೊಪ್ಪ, ಕೆ.ಆರ್. ಗುರುಪ್ರಸಾದ ಕಾಗೋಡು, ವೀರಭದ್ರಪ್ಪ ಜಂಬಗಿ, ಕವಿತಾ ಜಯಣ್ಣ ಮತ್ತಿತರರು ಇದ್ದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200