ಸಾಗರದ ಸಿದ್ದಪ್ಪಗೆ 4 ವರ್ಷ ಕಠಿಣ ಜೈಲು ಶಿಕ್ಷೆ, ದಂಡ, ಕಾರಣವೇನು?

 ಶಿವಮೊಗ್ಗ  LIVE 

ಸಾಗರ: ಕ್ಷುಲಕ ವಿಚಾರಕ್ಕೆ ದೊಣ್ಣೆಯಿಂದ ಹೊಡೆದು ವ್ಯಕ್ತಿಯೊಬ್ಬರ ಕೊಲೆ ಮಾಡಿದ್ದಕ್ಕಾಗಿ ಸಾಗರ (Sagara man) ತಾಲೂಕು ಮೂರಳ್ಳಿ ಮಾರತಿ ಗ್ರಾಮದ ಸಿದ್ದಪ್ಪ (38) ಎಂಬಾತನಿಗೆ ಜೈಲು ಶಿಕ್ಷೆಯಾಗಿದೆ. 4 ವರ್ಷ ಕಠಿಣ ಕಾರಾಗೃಹ ಶಿಕ್ಷೆ, ₹13,000 ದಂಡ ವಿಧಿಸಲಾಗಿದೆ. ದಂಡ ಕಟ್ಟಲು ತಪ್ಪಿದಲ್ಲಿ 6 ತಿಂಗಳು ಸಾದಾ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ.

ಮೊಬೈಲ್‌ ಚಾರ್ಜ್‌ ವಿಚಾರದಲ್ಲಿ ಕಿರಿಕ್‌

ಸಿದ್ದಪ್ಪ ಮೂರಳ್ಳಿ ಮಾರತಿ ಗ್ರಾಮದ ತಿಮ್ಮಪ್ಪ ಮತ್ತು ಲಕ್ಷ್ಮಿ ದಂಪತಿಯ ಮನೆಗೆ ಅಕ್ರಮವಾಗಿ ಪ್ರವೇಶಿಸಿ, ಮೊಬೈಲ್‌ ಚಾರ್ಜ್‌ ಹಾಕುವ ವಿಚಾರದಲ್ಲಿ ಜಗಳ ಮಾಡಿದ್ದ. ದೊಣ್ಣೆಯಿಂದ ಹೊಡೆದು ಮನೆಯ ಡಿಶ್‌ ಬುಟ್ಟಿಯನ್ನು ಒಡೆದು ಹಾಕಿದ್ದ. ಅಲ್ಲದೆ ದೊಣ್ಣೆಯಿಂದ ತಿಮ್ಪಪ್ಪನ ಎಡಗಣ್ಣಿನ ಹುಬ್ಬಿನ ಮೇಲ್ಭಾಗಕ್ಕೆ ಹೊಡೆದಿದ್ದ. ತೀವ್ರ ಗಾಯಗೊಂಡಿದ್ದ ಉಡುಪಿಯ ಸರ್ಕಾರಿ ಆಸ್ಪತ್ರೆಯಲ್ಲಿ 2022ರ ನವೆಂಬರ್‌ 9ರಂದು ಮೃತಪಟ್ಟಿದ್ದರು ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತನಿಖೆ, ದೋಷಾರೋಪ ಪಟ್ಟಿ ಸಲ್ಲಿಕೆ

ಘಟನೆ ಸಂಬಂಧ ಸಾಗರದ ಕಾರ್ಗಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಆಗಿನ ಸಾಗರ ಸರ್ಕಲ್‌ ಇನ್ಸ್‌ಪೆಕ್ಟರ್‌ ಕೆ.ವಿ.ಕೃಷ್ಣಪ್ಪ, 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಸಿದ್ದಪ್ಪನ ವಿರುದ್ಧದ ಆರೋಪ ಸಾಬೀತಾಗಿದೆ.

Jail-and-fine-for-Siddappa-in-Sagara

ಇದನ್ನೂ ಓದಿ » ಶಿವಮೊಗ್ಗದಲ್ಲಿ ಚಾಕು ಇರಿತ, ವ್ಯಕ್ತಿಗೆ ಗಂಭೀರ ಗಾಯ, ಎಲ್ಲಿ? ಹೇಗಾಯ್ತು ಘಟನೆ?

ನ್ಯಾಯಾಧೀಶರಾದ ರವೀಂದ್ರ.ಆರ್‌ ಅವರು ಸಿದ್ದಪ್ಪಗೆ ಶಿಕ್ಷೆ ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಅಣ್ಣಪ್ಪ ನಾಯ್ಕ್‌ ವಾದ ಮಂಡಿಸಿದ್ದರು.

ಇದನ್ನೂ ಓದಿ » ಕಾರು, ಬಸ್ಸು ಮುಖಾಮುಖಿ ಡಿಕ್ಕಿ, ಕಾರು ನಜ್ಜುಗುಜ್ಜು, ಎಲ್ಲಿ? ಹೇಗಾಯ್ತು ಘಟನೆ?

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment