SHIVAMOGGA LIVE NEWS | 20 MAY 2023
SAGARA : ತಾಂತ್ರಿಕ ದೋಷದಿಂದ ಕೆಎಸ್ಆರ್ಟಿಸಿ ಬಸ್ (KSRTC Bus) ಕೆಟ್ಟು ನಿಂತು, ಪ್ರಯಾಣಿಕರು ಸುಮಾರು ಮೂರು ಗಂಟೆ ಪರದಾಡುವಂತಾಯಿತು. ಸಾಗರ ಬಸ್ ನಿಲ್ದಾಣದಲ್ಲಿ ಘಟನೆ ಸಂಭವಿಸಿದೆ. ಪರ್ಯಾಯ ಬಸ್ ವ್ಯವಸ್ಥೆ ಮಾಡದ್ದಕ್ಕೆ ಅಧಿಕಾರಿಗಳ ವಿರುದ್ಧ ಪ್ರಯಾಣಿಕರು ಹಿಡಿಶಾಪ ಹಾಕಿದರು.
ಶಿವಮೊಗ್ಗ – ಸಾಗರ – ಕಾರವಾರ ಮಾರ್ಗದ ಕೆಎಸ್ಅರ್ಟಿಸಿ ಬಸ್ಸಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಸಾಗರ ಬಸ್ ನಿಲ್ದಾಣಕ್ಕೆ ಬರುತ್ತಿದ್ದಂತೆ ಪ್ರಯಾಣಿಕರನ್ನು ಕೆಳಗಿಳಿಸಿ ಬಸ್ಸನ್ನು ರಿಪೇರಿಗೆ ಕೊಂಡೊಯ್ಯಲಾಯಿತು. ಸುಮಾರು 30ಕ್ಕೂ ಹೆಚ್ಚು ಪ್ರಯಾಣಿಕರು ಆ ಬಸ್ಸಿನಲ್ಲಿದ್ದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಎರಡೂವರೆ ಗಂಟೆ ಕಾದ ಪ್ರಯಾಣಿಕರು
ಬೆಳಗ್ಗೆ 10.30ರ ಹೊತ್ತಿಗೆ ಸಾಗರ ನಿಲ್ದಾಣಕ್ಕೆ ಬಂದು ಪ್ರಯಾಣಿಕರನ್ನು ಇಳಿಸಿ ತೆರಳಿದ ಬಸ್ (KSRTC Bus) ಹಿಂತಿರುಗಲೆ ಇಲ್ಲ. ಸತತ ಎರಡೂವರೆಗೆ ಗಂಟೆ ಕಾದರೂ ಪರ್ಯಾಯ ವ್ಯವಸ್ಥೆ ಆಗಲಿಲ್ಲ. ತಾವು ಬಂದಿದ್ದ ಬಸ್ ಕೂಡ ಮರಳಿ ಬರಲಿಲ್ಲ. ಇದರಿಂದ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು. ನಿಲ್ದಾಣದ ಅಧಿಕಾರಿಗಳನ್ನು ವಿಚಾರಿಸಿ ಹೈರಾಣಾದರು.
ಡಿಪೋ ಮ್ಯಾನೇಜರ್ ಮಧ್ಯ ಪ್ರವೇಶ
ಕಾರವಾರಕ್ಕೆ ತೆರಳಬೇಕಿದ್ದ ಬಸ್ ಕೆಟ್ಟು ನಿಂತ ವಿಚಾರ ತಿಳಿಯುತ್ತಿದ್ದಂತೆ ಡಿಪೋ ಮ್ಯಾನೇಜರ್ ರಾಜಪ್ಪ ಅವರು ಮಧ್ಯ ಪ್ರವೇಶಿಸಿದರು. ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಿದರು.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
ʼಬಸ್ಸಿನ ಹ್ಯಾಂಗರ್ ಸೆಟ್ ತುಂಡಾಗಿದೆ. ನಮ್ಮ ಡಿಪೋದಲ್ಲಿ ಆ ಮಾದರಿ ಬಸ್ಸಿನ ಹ್ಯಾಂಗರ್ ಇಲ್ಲ. ಅದನ್ನು ಸ್ಥಳೀಯವಾಗಿ ಖರೀದಿಸಿ ವ್ಯವಸ್ಥೆ ಮಾಡಿದ್ದೇವೆ. ಯಾವುದೆ ಡಿಪೋದ ವಾಹನಗಳಾಗಲಿ. ಪ್ರಯಾಣಿಕರು ನಮ್ಮವರು. ಅವರಿಗೆ ಅನುಕೂಲ ಮಾಡಿಕೊಡುವುದು ನಮ್ಮ ಜವಾಬ್ದಾರಿ. ಹಾಗಾಗಿ ಪರ್ಯಯ ವ್ಯವಸ್ಥೆ ಮಾಡಿದ್ದೇವೆʼ ಎಂದು ರಾಜಪ್ಪ ಅವರು ತಿಳಿಸಿದರು.
ಇದನ್ನೂ ಓದಿ – ಸಾಗರದಲ್ಲಿ ವಿದ್ಯಾರ್ಥಿಗಳ ದಿಢೀರ್ ಪ್ರತಿಭಟನೆ, ಶಾಸಕ ಬೇಳೂರು ಗೋಪಾಲಕೃಷ್ಣ ಫೋನ್ ಬಳಿಕ ಹೋರಾಟ ಅಂತ್ಯ