ರಸ್ತೆಯಲ್ಲಿ ದಿಢೀರ್‌ ಎದುರಿಗೆ ಬಂದ ಮುಸುಕುಧಾರಿ, ಖಾರದ ಪುಡಿ ಎರಚಿ, ಗೃಹಿಣಿ ತಲೆಗೆ ರಾಡ್‌ನಿಂದ ಹೊಡೆತ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಆನಂದಪುರ: ಇಲ್ಲಿನ ಮಸ್ಕಲಬೈಲು ಗ್ರಾಮದಲ್ಲಿ ಬೈಕಿನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರ ಕಣ್ಣಿಗೆ ಖಾರದ ಪುರಡಿ ಎರಚಿ, ಬೈಕ್‌ನ ಹಿಂಬದಿ ಕುಳಿತಿದ್ದ ಅವರ ಸೊಸೆಯ ತಲೆಗೆ ಸ್ಟೀಲ್‌ ರಾಡ್‌ನಿಂದ ಹೊಡೆಯಲಾಗಿದೆ (Shocking attack) ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ » ಶಿವಮೊಗ್ಗದ ಮತ್ತೆರಡು ಇಂದಿರಾ ಕ್ಯಾಂಟೀನ್‌ಗಳು ಉದ್ಘಾಟನೆಗೆ ಟೈಮ್‌ ಫಿಕ್ಸ್‌

ಶೃತಿ ಅವರು ಸೊರಬದಲ್ಲಿ ಕೆಲಸ ಮುಗಿಸಿ ವಾಪಸ್ ಬರುತ್ತಿದ್ದರು. ಅವರ ಮಾವ ಶೃತಿ ಅವರನ್ನು ಬೈಕಿನಲ್ಲಿ ಮನೆಗೆ ಕರೆದುಕೊಂಡು ಹೋಗುತ್ತಿದ್ದರು. ಆಗ ಮರದ ಮರೆಯಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ ದಿಢೀರ್‌ ರಸ್ತೆಗೆ ಬಂದ್ದು ಅಡ್ಡಗಟ್ಟಿದ್ದಾನೆ. ಜರ್ಕಿನ್‌ ಧರಿಸಿದ್ದ ಆತ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. 

281123-Anandapura-Police-Station-Board.webp

ಮೊದಲು ಶೃತಿ ಅವರ ಮಾವನ ಕಣ್ಣಿಗೆ ಖಾರದ ಪುಡಿ ಎರಚಿದ ಆತ, ಶೃತಿ ಅವರ ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆದಿದ್ದಾನೆ. ಗಾಯಗೊಂಡಿದ್ದ ಶೃತಿ ಅವರನ್ನು ಕೂಡಲೆ ಶಿವಮೊಗ್ಗದ ಮ್ಯಾಕ್ಸ್‌ ಆಸ್ಪತ್ರೆಗೆ ಕರೆದೊಯ್ದು ದಾಖಲು ಮಾಡಲಾಗಿದೆ. ಘಟನೆ ಸಂಬಂಧ ಆನಂದಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment