ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 4 JANUARY 2024
SAGARA : ಜ.14 ಮತ್ತು 15ರಂದು ಸಿಗಂದೂರು ಶ್ರೀ ಚೌಡೇಶ್ವರಿ ದೇವಿ ಜಾತ್ರೆ ಮಹೋತ್ಸವ ನಡೆಯಲಿದೆ. ದೇವಸ್ಥಾನದಲ್ಲಿ ಎರಡು ದಿನ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಏನೇನೆಲ್ಲ ಕಾರ್ಯಕ್ರಮ ಇರಲಿದೆ?
ಜ.14 ರಂದು ಬೆಳಗ್ಗೆ ಶ್ರೀ ಕ್ಷೇತ್ರದಲ್ಲಿ ದೇವಿಗೆ ಮಹಾಭಿಷೇಕ, ಹೂವು ಮತ್ತು ಆಭರಣದ ಅಲಂಕಾರ ನೆರವೇರಿಸಲಾಗುತ್ತದೆ. ಗೋಪೂಜೆ, ಗುರು ಪೂಜೆ ನಡೆಯಲಿದೆ. ರಥ ಮತ್ತು ಪಲ್ಲಕ್ಕಿಯನ್ನು ಮೂಲಸ್ಥಾನಕ್ಕೆ ಕೊಂಡೊಯ್ಯಲಾಗುತ್ತದೆ. ದೇವಿಯ ಮೂಲ ಸ್ಥಳ ಸೀಗೆ ಕಣಿವೆಯಲ್ಲಿ ಪೂಜೆ ಸಲ್ಲಿಸಿ ಪೂರ್ಣಕುಂಭದೊಂದಿಗೆ ಧರ್ಮಜ್ಯೋತಿಯ ಮೆರವಣಿಗೆ ನಡೆಸಲಾಗುತ್ತದೆ. ಸಂಜೆ 5 ಗಂಟೆಗೆ ಗುರು ಪೂಜೆ, ಸಂಜೆ 6ಕ್ಕೆ ಗಂಗಾರತಿ ನಡೆಯಲಿದೆ.
ಜ.15 ರಂದು ಬೆಳಗ್ಗೆ ನವಚಂಡಿಕಾ ಹೋಮ, ದುರ್ಗಾ ಪೂಜೆ, ರಂಗ ಪೂಜೆ ನೆಡೆಯಲಿದೆ.
ಜಾತ್ರೆಗೆ ಶ್ರೀಗಳ ಸಾನ್ನಿಧ್ಯ, ಗಣ್ಯರಿಂದ ಉದ್ಘಾಟನೆ
ಮಳಲಿ ಮಠದ ಡಾ. ನಾಗಭೂಷಣ್ ಶಿವಾಚಾರ್ಯ ಸ್ವಾಮೀಜಿ ಜಾತ್ರೆಯ ದಿವ್ಯ ಸಾನಿಧ್ಯ ವಹಿಸುವರು. ಕೇರಳದ ಶಿವಗಿರಿ ಬ್ರಹ್ಮ ಶ್ರೀ ನಾರಾಯಣಗುರು ಮಠದ ಪೀಠಾಧಿಪತಿ ಶ್ರೀ ಸಚ್ಚಿದಾನಂದ ಸ್ವಾಮೀಜಿ ಅವರು ಧರ್ಮಜ್ಯೋತಿಗೆ ಚಾಲನೆ ನೀಡಲಿದ್ದಾರೆ. ಪ್ರದೇಶ ಆರ್ಯ ಈಡಿಗ ಸಂಘದ ಅಧ್ಯಕ್ಷ ಡಾ. ಎಂ ತಿಮ್ಮೇಗೌಡ ಅವರು ಜಾತ್ರೆಗೆ ಚಾಲನೆ ನೀಡಲಿದ್ದಾರೆ ಎಂದು ಶ್ರೀ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಅನುವಂಶೀಯ ಧರ್ಮದರ್ಶಿ ಡಾ. ರಾಮಪ್ಪ ತಿಳಿಸಿದ್ದಾರೆ.
ಜಾತ್ರೆಗೆ ಬರುವ ಭಕ್ತರಿಗೆ ಅನ್ನಸಂತರ್ಪಣೆ, ಸಾರಿಗೆ ವ್ಯವಸ್ಥೆ ಮತ್ತು ವಿಶೇಷ ಲಾಂಚ್ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಿಯ ದರ್ಶನ ಪಡೆಯಬೇಕು ಎಂದು ದೇಗುಲ ಆಡಳಿತ ಮಂಡಳಿ ತಿಳಿಸಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ವೈವಭದ ತೆಪ್ಪೋತ್ಸವ, ಕಣ್ತುಂಬಿಕೊಂಡ ಜನಸಾಗರ, ಇಲ್ಲಿದೆ 12 ಫೋಟೊಗಳು