ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | SHIMOGA NEWS | 9 ಫೆಬ್ರವರಿ 2022
ಸಾಗರ ಜಂಬಗಾರು ರೈಲ್ವೆ ನಿಲ್ದಾಣದಲ್ಲಿ ಮೈಸೂರು – ತಾಳಗುಪ್ಪ ರೈಲು ನಿಲುಗಡೆ ಸಮಯವನ್ನು ಹೆಚ್ಚಳ ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಆರು ತಿಂಗಳ ಅವಧಿಗೆ ಪ್ರಯೋಗಿಕವಾಗಿ ನಿಲುಗಡೆ ಸಮಯವನ್ನು ಐದು ನಿಮಿಷಕ್ಕೆ ಹೆಚ್ಚಳ ಮಾಡಲಾಗಿದೆ.
ಫೆಬ್ರವರಿ 10ರಿಂದ ರಿಂದ ಆಗಸ್ಟ್ 9ರವರೆಗೆ ಆರು ತಿಂಗಳ ಅವಧಿಗೆ ಪ್ರಾಯೋಗಿಕ ಆಧಾರದ ಮೇಲೆ ನಿಲುಗಡೆ ಸಮಯ ಹೆಚ್ಚಳ ಮಾಡಲಾಗಿದೆ. ಪಾರ್ಸಲ್ ಲೋಡಿಂಗ್ ಅನ್ನು ಹೆಚ್ಚಿಸಲು ಸಾಗರ ಜಂಬಗಾರು ರೈಲ್ವೆ ನಿಲ್ದಾಣದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ರೈಲು ಸಂಖ್ಯೆ 16227/16228 ಮೈಸೂರು – ತಾಳಗುಪ್ಪ ಮೈಸೂರು ಎಕ್ಸ್ ಪ್ರೆಸ್ ರೈಲಿನ ನಿಲುಗಡೆ ಸಮಯವನ್ನು 2 ನಿಮಿಷದಿಂದ 5 ನಿಮಿಷಕ್ಕೆ ಹಚ್ಚಿಸಲು ನಿರ್ಧರಿಸಲಾಗಿದೆ.
ರೈಲು ಸಂಖ್ಯೆ 16227 ಮೈಸೂರು – ತಾಳಗುಪ್ಪ ಎಕ್ಸ್ ಪ್ರೆಸ್ : ಸಾಗರ ಜಂಬಗಾರು ನಿಲ್ದಾಣಕ್ಕೆ 6:30ಕ್ಕೆ ಆಗಮಿಸಿ ರಿಂದ 6:32ಕ್ಕೆ ನಿರ್ಗಮಿಸುತ್ತಿತ್ತು. ಇನ್ಮುಂದೆ 6:30ಕ್ಕೆ ಆಗಮಿಸಿ 6:35ಕ್ಕೆ ನಿರ್ಗಮಿಸಲಿದೆ.
ರೈಲು ಸಂಖ್ಯೆ 16228 ತಾಳಗುಪ್ಪ – ಮೈಸೂರು ಎಕ್ಸ್ ಪ್ರೆಸ್ : ಸಾಗರ ಜಂಬಗಾರು ನಿಲ್ದಾಣಕ್ಕೆ 8:36ಕ್ಕೆ ಆಗಮಿಸಿ 8:38ಕ್ಕೆ ನಿರ್ಗಮಿಸುತ್ತಿತ್ತು. ಇನ್ಮುಂದೆ 8:36ಕ್ಕೆ ಆಗಮಿಸಿ 8:41ಕ್ಕೆ ನಿರ್ಗಮಿಸಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
Shimoga District Profile | About Shivamogga Live
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422