ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಆನಂದಪುರ: ಮಲಂದೂರು ಗ್ರಾಮದ ತೋಟವೊಂದಕ್ಕೆ ನುಗ್ಗಿದ ಕಳ್ಳರು ಸುಮಾರು 200 ಗಿಡಗಳಲ್ಲಿದ್ದ ಏಲಕ್ಕಿ ಬಾಳೆಗೊನೆಗಳನ್ನು (banana) ಕಟಾವು ಮಾಡಿ ಕಳ್ಳತನ ಮಾಡಿರುವ ಘಟನೆ ನಡೆದಿದೆ. ಕಳುವಾದ ಬಾಳೆಯ ಮೌಲ್ಯ ಸುಮಾರು ₹1.68 ಲಕ್ಷ ಎಂದು ಅಂದಾಜಿಸಲಾಗಿದೆ.
ದಾಸಕೊಪ್ಪದ ಗಜೇಂದ್ರ ಎಂಬುವವರು ಮಲಂದೂರು ಅಡಿಕೆ ಮತ್ತು ಬಾಳೆ ತೋಟ ಹೊಂದಿದ್ದಾರೆ. ರಾತ್ರಿ ವೇಳೆ ತೋಟಕ್ಕೆ ನುಗ್ಗಿರುವ ಕಳ್ಳರು ಕೃತ್ಯ ಎಸಗಿದ್ದಾರೆ. ಗಜೇಂದ್ರ ಅವರು ಬೆಳಗ್ಗೆ ತೋಟಕ್ಕೆ ಹೋದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

ತೋಟದಲ್ಲಿದ್ದ ಸುಮಾರು 180 ರಿಂದ 200 ಬಾಳೆಗಿಡಗಳಲ್ಲಿದ್ದ ಏಲಕ್ಕಿ ಬಾಳೆಗೊನೆಗಳನ್ನು ಕಟಾವು ಮಾಡಿದ್ದಾರೆ. ಒಟ್ಟು ಸುಮಾರು 2400 ಕೆ.ಜಿ ತೂಕದ ಬಾಳೆಗೊನೆಗಳನ್ನು ವಾಹನವೊಂದರಲ್ಲಿ ತುಂಬಿಕೊಂಡು ಪರಾರಿಯಾಗಿದ್ದಾರೆ. ಮಾರುಕಟ್ಟೆ ದರದಂತೆ ಇದರ ಒಟ್ಟು ಮೌಲ್ಯ ₹1,68,000 ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇದನ್ನೂ ಓದಿ – ಬಿಜೆಪಿ ನಾಯಕನಿಗೆ ಸಚಿವ ದರ್ಜೆ ಸ್ಥಾನಮಾನ ನೀಡಿದ ಕಾಂಗ್ರೆಸ್ ಸರ್ಕಾರ, ಕೆಂಡವಾದ ಕೈ ಕಾರ್ಯಕರ್ತರು, ಏನಿದು?
ಘಟನೆ ಸಂಬಂಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LATEST NEWS
- ಶಿವಮೊಗ್ಗದಲ್ಲಿ ಶೆಟ್ಟರ ಸಂತೆ, ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್, ಏನೇನೆಲ್ಲ ಸ್ಟಾಲ್ಗಳಿವೆ?

- ಸರ್ಕಾರಿ ಅಧಿಕಾರಿಗೆ ಜೈಲು ಶಿಕ್ಷೆ, ಏನಿದು ಪ್ರಕರಣ?

- ಶಿವಮೊಗ್ಗ ಮಾರುಕಟ್ಟೆಯಲ್ಲಿ ಇವತ್ತು ಎಷ್ಟಿದೆ ಅಡಿಕೆ ರೇಟ್? – ಇಂದಿನ ಅಡಿಕೆ ಧಾರಣೆ

- ಹೊಟೇಲ್ ಮಾಲೀಕನಿಂದ ಕೊಲೆ, ಕಾರಿನಲ್ಲಿ ಮೃತದೇಹ ಸಾಗಿಸುವಾಗ ಪೊಲೀಸ್ ಬಲೆಗೆ

- Acting Registrar Appointed for Kuvempu University

About The Editor
ನಿತಿನ್ ಆರ್.ಕೈದೊಟ್ಲು















